ADVERTISEMENT

ಶಕ್ತಿ ದೇವತೆಗಳ ಆರಾಧಣೆಯಿಂದ ಆತ್ಮಬಲ ಹೆಚ್ಚಳ

ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್‍ಜಿ ನುಡಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 13:16 IST
Last Updated 16 ಅಕ್ಟೋಬರ್ 2021, 13:16 IST
ಬೀದರ್‌ನ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ನವದೇವಿಯರ ದರುಶನ ಹಾಗೂ ಅವರ ದಿವ್ಯ ಶಕ್ತಿಯ ಪರಿಚಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಗಂಡಪ್ಪ ಚಿಲ್ಲರ್ಗಿ, ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ್ ಕೋರವಾರ, ಬಿ.ಕೆ ಮಂಗಲಾ, ಬಿ.ಕೆ ವಿಜಯಲಕ್ಷ್ಮಿ, ಬಿ.ಕೆ ವಾಣಿ ಬಹೆನ್ ಸಾಮೂಹಿಕವಾಗಿ ದೀಪ ಬೆಳಗಿಸಿದರು
ಬೀದರ್‌ನ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ನವದೇವಿಯರ ದರುಶನ ಹಾಗೂ ಅವರ ದಿವ್ಯ ಶಕ್ತಿಯ ಪರಿಚಯ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಗಂಡಪ್ಪ ಚಿಲ್ಲರ್ಗಿ, ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ್ ಕೋರವಾರ, ಬಿ.ಕೆ ಮಂಗಲಾ, ಬಿ.ಕೆ ವಿಜಯಲಕ್ಷ್ಮಿ, ಬಿ.ಕೆ ವಾಣಿ ಬಹೆನ್ ಸಾಮೂಹಿಕವಾಗಿ ದೀಪ ಬೆಳಗಿಸಿದರು   

ಬೀದರ್‌: ‘ಶಕ್ತಿ ದೇವತೆಗಳ ಆರಾಧಣೆಯಿಂದ ವ್ಯಕ್ತಿಯ ಆತ್ಮಬಲ ಹೆಚ್ಚುತ್ತದೆ. ದೇವತೆಗಳ ದಿವ್ಯ ಶಕ್ತಿಯ ಪರಿಚಯವೂ ಆಗುತ್ತದೆ’ ಎಂದು ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್‍ಜಿ ನುಡಿದರು.

ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮ ಆವರಣದಲ್ಲಿ ನವದೇವಿಯರ ದರುಶನ ಹಾಗೂ ಅವರ ದಿವ್ಯ ಶಕ್ತಿಯ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧೃಢವಾದ ಶಕ್ತಿಯನ್ನು ದೇವಿ ವೈಷ್ಣವಿ ನೀಡಿದರೆ, ದೇವಿ ಸಂತೋಷಿ ನಮ್ಮೆಲ್ಲರನ್ನು ಸದಾ ಸಂತುಷ್ಟವಾಗಿಡುತ್ತಾಳೆ. ಪಾರ್ವತಿ ದೇವಿ ಭಕ್ತರ ಇಷ್ಟಾರ್ಥ ಪೂರೈಸುತ್ತಾಳೆ. ಪರೀಕ್ಷಕ ಶಕ್ತಿ ತುಂಬುವ ಗಾಯತ್ರಿ, ವಿದ್ಯೆ ದಯಪಾಲಿಸುವ ಸರಸ್ವತಿ, ಒಂದು ಕೈಯಿಂದ ಧನ ಸಂಪತ್ತು, ಮತ್ತೊಂದು ಕೈಯಿಂದ ಎಲ್ಲರ ಮನಸ್ಸು ಕಮಲದಂತೆ ಅರಳಿಸುವ ಶಕ್ತಿ ಲಕ್ಷ್ಮೀದೇವಿಗೆ ಇದೆ’ ಎಂದರು.

‘ಜಗದಂಬಾ ಸರ್ವರ ಸಂಕಷ್ಟಗಳನ್ನು ದೂರ ಮಾಡುತ್ತಾಳೆ. ದುರ್ಗೆ ದುಷ್ಟರ, ದುರ್ಗುಣಗಳ ಸಂಹಾರ ಮಾಡುತ್ತಾಳೆ. ಬ್ರಹ್ಮಕುಮಾರಿ ಜ್ಞಾನಗಂಗಾ ಆತ್ಮವನ್ನು ಪರಮಾತ್ಮನೆಡೆಗೆ ಸಾಗಲು ಜ್ಞಾನಾಮೃತವನ್ನು ಹರಿಸುತ್ತಾಳೆ. ಒಟ್ಟಾರೆ ಲಕ್ಷ್ಮೀಯ ಹಸ್ತ, ಸರಸ್ವತಿಯ ಸಹಕಾರ ಹಾಗೂ ಗಣಪತಿಯ ವಾಸವಿದ್ದರೆ ಎಲ್ಲವೂ ಸಾಧ್ಯ’ ಎಂದರು.

ADVERTISEMENT

ಬಿ.ಕೆ ಮಂಗಲಾ, ಬಿ.ಕೆ ಗುರುದೇವಿ, ಬಿ.ಕೆ. ವಾಣಿ ಹಾಗೂ ಬಿ.ಕೆ ಶಿಲ್ಪಾ ಅವರು ನವದೇವಿಯರಿಗೆ ಮಾಲಾರ್ಪಣೆ ಮಾಡಿದರು.

ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಗಂಡಪ್ಪ ಚಿಲ್ಲರ್ಗಿ, ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ್ ಕೋರವಾರ, ಬಿ.ಕೆ ಮಂಗಲಾ, ಬಿ.ಕೆ ವಿಜಯಲಕ್ಷ್ಮಿ, ಬಿ.ಕೆ ವಾಣಿ ಬಹೆನ್ ಸಾಮೂಹಿಕವಾಗಿ ದೀಪ ಬೆಳಗಿಸಿದರು.

ಭವನೇಶ್ವರಿ ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ವಿನಯಾ, ಅನುಷ್ಕಾ, ಸೌಮ್ಯಕಾ, ಪ್ರಣಿತಿ, ಪ್ರೀತಿ ಸ್ವಾಮಿ, ಆರ್ಯಾ, ಸಂಚಿತಾ, ಅರ್ಪಿತಾ, ಪ್ರವಿಣ್ಯಾ ರವಿಕುಮಾರ ಶಂಕರಶೆಟ್ಟಿ ನೃತ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.