ADVERTISEMENT

ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ: ರಾಯಚೂರು, ವಿಜಯಪುರ ತಂಡಗಳ ಜಯಭೇರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:37 IST
Last Updated 29 ಡಿಸೆಂಬರ್ 2025, 5:37 IST
ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ವಿಜಯಪುರ ಹಾಗೂ ಕಲಬುರಗಿ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ಪಿಡಬ್ಲ್ಯೂಡಿ ಇಇ ಶಿವಶಂಕರ್‌ ಕಾಮಶೆಟ್ಟಿ ಅವರು ಟಾಸ್‌ ಹಾರಿಸಿದರು
ಬೀದರ್‌ ನೆಹರೂ ಕ್ರೀಡಾಂಗಣದಲ್ಲಿ ವಿಜಯಪುರ ಹಾಗೂ ಕಲಬುರಗಿ ತಂಡಗಳ ನಡುವಿನ ಪಂದ್ಯಕ್ಕೂ ಮುನ್ನ ಪಿಡಬ್ಲ್ಯೂಡಿ ಇಇ ಶಿವಶಂಕರ್‌ ಕಾಮಶೆಟ್ಟಿ ಅವರು ಟಾಸ್‌ ಹಾರಿಸಿದರು   

ಬೀದರ್: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯದ 14 ವರ್ಷದ ಒಳಗಿನ ಬಾಲಕರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿ ಅಂಗವಾಗಿ ನಗರದಲ್ಲಿ ಭಾನುವಾರ ನಡೆದ ಪಂದ್ಯಗಳಲ್ಲಿ ರಾಯಚೂರು ಹಾಗೂ ವಿಜಯಪುರ ತಂಡಗಳು ಜಯಭೇರಿ ಬಾರಿಸಿದವು.

ರಾಯಚೂರು ತಂಡವು ಬಾಗಲಕೋಟೆ ತಂಡವನ್ನು ಸೋಲಿಸಿತು. ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಗಲಕೋಟೆ ತಂಡ 32.2 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿತು. ಪ್ರದೀಪ್ 48 ಎಸೆತಗಳಲ್ಲಿ 23 ರನ್ ಸಿಡಿಸಿದರು. ಅಭಿನವ್ 58 ಎಸೆತಗಳಲ್ಲಿ 21 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ರಾಯಚೂರು ತಂಡವು 8 ಓವರ್‌ನಲ್ಲಿ 15 ರನ್ ನೀಡಿ ಮೂರು ವಿಕೆಟ್ ಪಡೆದರೆ, ಅನು ಪ್ರಸಾದ್ ಆರು ಓವರ್‌ನಲ್ಲಿ 10 ರನ್ ನೀಡಿ ಎರಡು ವಿಕೆಟ್ ಪಡೆದರೆ, ರೂವಮ್ 8 ಓವರ್‌ನಲ್ಲಿ ಎರಡು ವಿಕೆಟ್ ಪಡೆದರು. ನಂತರ ಬ್ಯಾಟಿಂಗ್ ಮಾಡಿದ ರಾಯಚೂರು ತಂಡವು 9.2 ಓವರ್‌ಗಳಲ್ಲಿ 85 ರನ್ ಗಳಿಸಿ ಜಯಗಳಿಸಿ ಜಯಭೇರಿ ಗಳಿಸಿತು.

ADVERTISEMENT

ವಿವೇಕಾನಂದ 30 ಎಸೆತಗಳಲ್ಲಿ 31 ರನ್ ಗಳಿಸಿದರೆ, ತೇಜಸ್ 18 ಎಸೆತಗಳಲ್ಲಿ 27 ರನ್ ಗಳಿಸಿದರು. ಉದಯಕುಮಾರ, ಸಿದ್ರಾಮ ಜಮಾದಾರ ಅಂಪೈರ್, ಸಂಜು ರಾಠೋಡ್ ಸ್ಕೋರರ್ ಆಗಿದ್ದರು.

ನೆಹರೂ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ವಿಜಯಪುರ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 50 ಓವರ್‌ಗಳಲ್ಲಿ 226 ರನ್‌ಗೆ 8 ವಿಕೆಟ್ ಕಳೆದುಕೊಂಡಿತು. ಎಂ.ಡಿ ಜಿಯಾದ್ 84 ಎಸೆತಗಳಲ್ಲಿ 55 ರನ್ ಹಾಗೂ ಪವನ್ ದೀಪ್ 22 ಎಸೆತಗಳಲ್ಲಿ 34 ರನ್ ಗಳಿಸಿದರು. ಕಲಬುರಗಿ ತಂಡದ ಪ್ರಣವ್ ಪಿ. 9 ಓವರ್‌ಗಳಲ್ಲಿ 59 ರನ್ ನೀಡಿ ಮೂರು ವಿಕೆಟ್ ಪಡೆದರು.

ವಿಜೀತ್ 10 ಓವರ್‌ಗಳಲ್ಲಿ 29 ರನ್ ನೀಡಿ ಎರಡು ವಿಕೆಟ್ ಪಡೆದರು. ಸೈಯದ್ 8 ಓವರ್‌ನಲ್ಲಿ 40 ರನ್ ನೀಡಿ ಎರಡು ವಿಕೆಟ್ ಪಡೆದರು. ನಂತರ ಬ್ಯಾಟ್ ಮಾಡಿದ ಕಲಬುರಗಿ ತಂಡ 35.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಕಲಬುರಗಿ ತಂಡದ ಪರವಾಗಿ ಗಜಾನನ 98 ಎಸೆತಗಳಲ್ಲಿ 64 ರನ್ ಹಾಗೂ ಸುಶೀಲಕುಮಾರ 48 ಎಸೆತಗಳಲ್ಲಿ 40 ರನ್ ಗಳಿಸಿದರು. ವಿಜಯಪುರ ತಂಡದ ಪವನ್ ದೀಪ 4.5 ಓವರ್‌ಗಳಲ್ಲಿ 29 ರನ್ ನೀಡಿ ಮೂರು ವಿಕೆಟ್ ಮತ್ತು ಹೃಷಿಕೇಶ್ 9 ಓವರ್‌ನಲ್ಲಿ 27 ರನ್ ನೀಡಿ ಎರಡು ವಿಕೆಟ್ ಹಾಗೂ ವಿವೇಕಾನಂದ 7 ಓವರ್‌ನಲ್ಲಿ 7 ರನ್ ನೀಡಿ ಎರಡು ವಿಕೆಟ್ ಪಡೆದರು.

ಬಾಗಣ್ಣ ಮಡಿವಾಣ, ನರೇಂದ್ರ ಎಸ್. ಎಂ ಅಂಪೈರ್, ಸಂತೋಷಕುಮಾರ ಪಾಟೀಲ್ ಸ್ಕೋರರ್ ಆಗಿದ್ದರು. ಪಂದ್ಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಶಂಕರ್‌ ಕಾಮಶೆಟ್ಟಿ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ರಾಯಚೂರು ವಲಯ ಸಂಚಾಲಕ ಕುಶಾಲ್ ಪಾಟೀಲ ಗಾದಗಿ, ಜಿಲ್ಲಾ ಸಂಯೋಜಕ ಸಂಜಯ್ ಜಾಧವ್ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲಕುಮಾರ ದೇಶಮುಖ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.