ಭಾಲ್ಕಿ: ‘ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಏಕಾಗ್ರತೆ ವೃದ್ಧಿಯಾಗಿ ಮನಸ್ಸಿನ ಚಂಚಲತೆ ದೂರಾಗುತ್ತದೆ’ ಎಂದು ಲಿಂಗಾಯತ ಮಹಾಮಠ ಗೋರ್ಟಾ ಮತ್ತು ಬಸವಗಿರಿಯ ಪ್ರಭುದೇವ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಹಲಸಿ(ಎಲ್) ಗ್ರಾಮದಲ್ಲಿ ನಡೆದ ಇಷ್ಟಲಿಂಗ ದೀಕ್ಷೆ, ವಚನಾಭಿಷೇಕ, ಯೋಗಾಂಗ ತ್ರಿವಿಧಿ ಪಾರಾಯಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಷ್ಟಲಿಂಗ ಪೂಜೆಯನ್ನು ಮಾಡಿಕೊಳ್ಳುವುದು ಕೇವಲ ಲಿಂಗಾಯತರಿಗಷ್ಟೇ ಸೀಮಿತವಾಗಿಲ್ಲ. ಇದನ್ನು ಎಲ್ಲರೂ ಮಾಡಿಕೊಳ್ಳಹುದು. ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದರ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳಿವೆ ಮತ್ತು ಪ್ರಯೋಜನೆಗಳಿವೆ. ಇಷ್ಟಲಿಂಗ ಪೂಜೆಯಿಂದ ಆತ್ಮಶಾಂತಿ, ಮಾನಸಿಕ ನೆಮ್ಮದಿ ಸಿಗುತ್ತದೆ. ಇದರಿಂದ ಮನಸ್ಸು ಪರಿವರ್ತನೆ ಜತೆಗೆ ಹೊಸ ಚೈತನ್ಯ ಸಿಗುತ್ತದೆ. ದಿನವೀಡಿ ಉತ್ಸಾಹದಿಂದ ಇರಲು ಸಾಧ್ಯ’ ಎಂದು ಹೇಳಿದರು.
ಗ್ರಾಮದ ಪ್ರಮುಖರು ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.