ADVERTISEMENT

ಬೀದರ್‌: ಪತ್ರಕರ್ತ ರೇವಣಸಿದ್ದಯ್ಯ ಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:12 IST
Last Updated 11 ಡಿಸೆಂಬರ್ 2025, 5:12 IST
<div class="paragraphs"><p>ರೇವಣಸಿದ್ದಯ್ಯ ಸ್ವಾಮಿ</p></div>

ರೇವಣಸಿದ್ದಯ್ಯ ಸ್ವಾಮಿ

   

ಬೀದರ್‌: ಪತ್ರಕರ್ತ ರೇವಣಸಿದ್ದಯ್ಯ ಸ್ವಾಮಿ (ರವಿ ಸ್ವಾಮಿ) ಹೆಡಗಾಪೂರ (48) ಅವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ತಂದೆ, ಪತ್ನಿ, ಮೂವರು ಗಂಡು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ಔರಾದ್‌ ತಾಲ್ಲೂಕಿನ ಹೆಡಗಾಪೂರದಲ್ಲಿ ಗುರುವಾರ ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ರೇವಣಸಿದ್ದಯ್ಯ ಅವರು ಬೀದರ್‌ ಜಿಲ್ಲಾಮಟ್ಟದ ‘ಜನದನಿ’ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕೆಲಸ ಮಾಡಿದ್ದರು. ಮೃದು ಮಾತಿನ ಸ್ನೇಹಜೀವಿಯಾಗಿದ್ದರು.

ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಮಂಗಳವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.