ಬಸವಕಲ್ಯಾಣ: ತಾಲ್ಲೂಕು ಮಾಜಿ ಸೈನಿಕರ ಸಂಘದಿಂದ ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಶುಕ್ರವಾರ ಹುತಾತ್ಮರಿಗೆ ಗೌರವ ಮತ್ತು ಕಾರ್ಗಿಲ್ ಯುದ್ಧದಲ್ಲಿನ ಯೋಧರನ್ನು ಸನ್ಮಾನ ಕಾರ್ಯಕ್ರಮ ನಡೆಯಿತು.
ಐತಿಹಾಸಿಕ ಕೋಟೆ ಎದುರಿನಿಂದ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ನಡೆಸಲಾಯಿತು. ತೆರೆದ ವಾಹನದಲ್ಲಿ ಹುತಾತ್ಮರ ಭಾವಚಿತ್ರಗಳನ್ನು ಇಟ್ಟು ಎದುರಲ್ಲಿ ನಿವೃತ್ತ ಯೋಧರು ಸಾಗಿದರು.
ತ್ರಿಪುರಾಂತ ಮಡಿವಾಳ ವೃತ್ತದ ಪಕ್ಕದಲ್ಲಿನ ಹುತಾತ್ಮ ಯೋಧ ಪಂಡಿತರಾವ ಕಾಂಗೆ ಅವರ ಸ್ಮಾರಕಕ್ಕೆ ಬಂದಾಗ, ಅವರ ಪ್ರತಿಮೆಗೆ ಪೂಜೆ ನೆರವೇರಿಸಿ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಮೌನಾಚರಣೆಗೈದು ನಂತರ ಗೌರವ ನಮನ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರನ್ನು ಸನ್ಮಾನಿಸಲಾಯಿತು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಾಬು ಗೋರ್ಟೆ, ಉಪಾಧ್ಯಕ್ಷ ಮಲ್ಲಪ್ಪ ಬಾಗೇವಾಡಿ, ಪ್ರಮುಖರಾದ ಸಿದ್ರಾಮ ಬೇಲೂರೆ, ಓಂಕಾರ ಬಿರಾದಾರ, ರಾಜಕುಮಾರ ಇರ್ಲೆ, ಪ್ರಕಾಶ ನೇತೆ, ರೇವಣಯ್ಯ ಸ್ವಾಮಿ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಬೊಕ್ಕೆ, ಭೀಮಾ ಫುಲೆ, ಚಂದ್ರಕಾಂತ ಮಾಳಿ, ಸಿದ್ರಾಮ ಗೌರ, ಬಳಿರಾಮ, ಬಾಬುರಾವ ಕಾಂಗೆ, ರಾಮಲಿಂಗಸ್ವಾಮಿ ರಾಮತೀರ್ಥ, ಭೀಮರಾವ ಕಾಂಬಳೆ, ದತ್ತು ಖಂಡಾಳೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.