ADVERTISEMENT

ಮುಖ್ಯಮಂತ್ರಿ ಬದಲಾವಣೆ ವಿಚಾರ ಶಿವಕುಮಾರ್ ಅವರನ್ನೇ ಕೇಳಿ: ರಾಮಲಿಂಗಾರೆಡ್ಡಿ‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 4:25 IST
Last Updated 13 ಫೆಬ್ರುವರಿ 2026, 4:25 IST
<div class="paragraphs"><p>ರಾಮಲಿಂಗಾರೆಡ್ಡಿ‌ (ಒಳಚಿತ್ರದಲ್ಲಿ) ಹಾಗೂ ಡಿ.ಕೆ. ಶಿವಕುಮಾರ್</p></div>

ರಾಮಲಿಂಗಾರೆಡ್ಡಿ‌ (ಒಳಚಿತ್ರದಲ್ಲಿ) ಹಾಗೂ ಡಿ.ಕೆ. ಶಿವಕುಮಾರ್

   

ಬೀದರ್: ಮುಖ್ಯಮಂತ್ರಿ ಬದಲಾವಣೆಯ ವಿಚಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಕೇಳಿ. ಮಾಧ್ಯಮದವರಿಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ‌ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ADVERTISEMENT

ನಾಯಕತ್ವ ಬದಲಾವಣೆ ವಿಷಯವಾಗಿ ನಾನು ಏನೂ ಮಾತನಾಡುವುದಿಲ್ಲ. ನಾನು ಏನಾದರೂ ಮಾತನಾಡಿದರೆ ಅದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಮಾಧ್ಯಮದವರು ರಾಮಲಿಂಗಾರೆಡ್ಡಿ‌ ಸಿಎಂ ಆಗಬೇಕು ಅಂತ ಹೇಳುತ್ತಾರೆ. ಆದರೆ, ಬೇರೆ ಯಾರೂ ಇದನ್ನು ಹೇಳುವುದಿಲ್ಲ.‌ ಮನುಷ್ಯ ಆಸೆಪಟ್ಟಿದಲ್ಲ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಸಂಪುಟ ಒಪ್ಪಿಗೆ ನೀಡಿದೆ. ಕ್ರಿಕೆಟ್ ಆಟ ಇಷ್ಟಪಡುವವರ ಬೇಡಿಕೆಯನ್ನು ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.