ಹುಮನಾಬಾದ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಲಗೈ ಸಮುದಾಯಕ್ಕೆ ಶೇ 6 ಮಿಸಲಾತಿ ಘೋಷಿಸಿರುವ ಹಿನ್ನೆಲೆಯಲ್ಲಿ ಪಟ್ಟಣದ ಡಾ .ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ತಾಲ್ಲೂಕು ಬಲಗೈ ಜಾತಿಗಳ ಒಕ್ಕೂಟ ಘಟಕದ ವತಿಯಿಂದ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಬಾಬು ಟೈಗರ್, ಗಜೇಂದ್ರ ಕನಕಟಕರ್, ಶಿವಪುತ್ರ ಮಾಳಗೆ, ಮಲ್ಲಿಕಾರ್ಜುನ ಮಹೇಂದ್ರಕರ್, ಗಣಪತಿ ಅಷ್ಟೂರೆ, ದಿಲೀಪ ಮರಮಪಳ್ಳಿಕರ, ಮನೋಜ ಜಾನವೀರ, ಮುಖೇಶ ಪಾಂಡೆ, ಶೆಶಿಕಾಂತ ಡಾಂಗೆ, ಶಿವಾನಂದ ಕಟ್ಟಿಮನಿ, ಸುಶೀಲಕುಮಾರ ಭೋಲಾ, ನೀಲಕಂಠ ವರವಟ್ಟಿ, ಸಂತೋಷ ಅತಿವಾಳ, ಲಕ್ಷ್ಮಣ ಗಡವಂತಿ, ಶಿವಕುಮಾರ ಸಾಗರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.