ADVERTISEMENT

SSLC Results | ಬೀದರ್‌: ಎಲ್ಲ ಕೆಟಗರಿಯಲ್ಲೂ ಬಾಲಕಿಯರದ್ದೇ ಮೇಲುಗೈ

ಇತರೆ ವರ್ಗದಲ್ಲಿ ಬಾಲಕರಿಂದ ಉತ್ತಮ ಸಾಧನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಮೇ 2025, 5:41 IST
Last Updated 8 ಮೇ 2025, 5:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೀದರ್‌: ಮೇ 2ರಂದು ಪ್ರಕಟಗೊಂಡ 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಇತರೆ ವರ್ಗದವರನ್ನು ಹೊರತುಪಡಿಸಿದರೆ ಮಿಕ್ಕುಳಿದ ಎಲ್ಲ ಪ್ರವರ್ಗಗಳಲ್ಲೂ ಬಾಲಕಿಯರೇ ಉತ್ತಮ ಸಾಧನೆ ತೋರಿ ಮೇಲುಗೈ ಸಾಧಿಸಿದ್ದಾರೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ಎಲ್ಲ ವರ್ಗಗಳಲ್ಲಿ ಬಾಲಕಿಯರದ್ದೇ ಉತ್ತಮ ಫಲಿತಾಂಶ ಬಂದಿದೆ. ‘2ಎ’, ‘3ಬಿ’ಯಲ್ಲೂ ಬಾಲಕಿಯರೇ ಪಾರಮ್ಯ ಸಾಧಿಸಿದ್ದಾರೆ.

ADVERTISEMENT

ಪರಿಶಿಷ್ಟ ಜಾತಿಯಲ್ಲಿ 2,965 ಬಾಲಕರು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1,093 ಜನ ಉತ್ತೀರ್ಣರಾಗಿದ್ದಾರೆ. ಇದೇ ವೇಳೆ ಪರಿಶಿಷ್ಟ ಜಾತಿಯ 3,030 ವಿದ್ಯಾರ್ಥಿನಿಯರಲ್ಲಿ 1,473ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಇದು ಶೇ 50ರಷ್ಟು ಸಮೀಪವಿದೆ. ಆದರೆ, ಬಾಲಕರ ಫಲಿತಾಂಶ ನೋಡಿದಾಗ ನಿರಾಸೆ ಮೂಡಿಸುತ್ತದೆ. ಪರಿಶಿಷ್ಟ ಪಂಗಡದಲ್ಲೂ ಹೆಚ್ಚು ಕಡಿಮೆ ಇದೇ ರೀತಿಯ ಫಲಿತಾಂಶ ಇದೆ. ಒಟ್ಟು 1,876 ಬಾಲಕರು ಪರೀಕ್ಷೆ ಬರೆದಿದ್ದರು. ಇದರಲ್ಲಿ 825 ಜನ ತೇರ್ಗಡೆ ಹೊಂದಿದ್ದಾರೆ. 1,143 ಬಾಲಕಿಯರು ಪಾಸಾಗಿದ್ದಾರೆ. 1,991 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು. ಪರಿಶಿಷ್ಟ ಜಾತಿಯವರಿಗೆ ಶೇ 42.80 ಫಲಿತಾಂಶ ಬಂದಿದ್ದು, ಇದು ಎಲ್ಲ ಪ್ರವರ್ಗಗಳಲ್ಲಿ ಅತಿ ಕಡಿಮೆ. ನಂತರದ ಸ್ಥಾನ ‘2ಬಿ’ ಪಡೆದಿದೆ. ಶೇ 43.65ರಷ್ಟು ಫಲಿತಾಂಶ ಗಳಿಸಿದೆ. ಇದರ ನಂತರದ ಸ್ಥಾನ ಪ್ರವರ್ಗ ಒಂದರದ್ದು ಇದ್ದು, ಶೇ 48.04 ಫಲಿತಾಂಶ ಲಭಿಸಿದೆ.

ಪ್ರವರ್ಗ ‘3ಬಿ’ಯಲ್ಲಿ 2,809 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 1,731 ಜನ ಪಾಸಾಗಿದ್ಧಾರೆ. 2,744 ಬಾಲಕಿಯರಲ್ಲಿ 2,040 ಬಾಲಕಿಯರು ಪಾಸಾಗಿದ್ದಾರೆ. ‘2ಎ’, ‘3ಎ’ನಲ್ಲೂ ಇದೇ ಪರಿಸ್ಥಿತಿ ಇದೆ. ಇತರೆ ಪ್ರವರ್ಗದಲ್ಲಿ ಬಾಲಕಿಯರಿಗಿಂತ ಬಾಲಕರು ಮುಂದೆ ಇದ್ದಾರೆ. 180 ಬಾಲಕರು ಪರೀಕ್ಷೆ ಬರೆದಿದ್ದು, 107 ಜನ ಉತ್ತೀರ್ಣರಾಗಿದ್ದಾರೆ. 118 ಬಾಲಕಿಯರಲ್ಲಿ 84 ಮಂದಿ ಪಾಸಾಗಿದ್ದಾರೆ.

‘ಶಿಕ್ಷಿತರಾದರು ನೌಕರಿ ಸಿಗುತ್ತಿಲ್ಲ ಎಂಬ ಭಾವನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸರ್ಕಾರದ ಹಲವು ಯೋಜನೆಗಳಿಂದ ಸದ್ಯದ ಪರಿಸ್ಥಿತಿಯಲ್ಲಿ ಹೊಟ್ಟೆ, ಬಟ್ಟೆಗೆ ಯಾರಿಗೂ ಅಂತಹ ಸಮಸ್ಯೆಗಳಿಲ್ಲ. ಗ್ಯಾಜೆಟ್‌ಗಳಲ್ಲಿ ಯುವಕರು ಹೆಚ್ಚಾಗಿ ಕಾಲಹರಣ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗುರು ಹಿರಿಯರ ಮಾತು ಕೇಳುವ ಸ್ಥಿತಿಯಲ್ಲಿ ಮಕ್ಕಳಿಲ್ಲ. ಇದು ಎಲ್ಲ ವರ್ಗದ ಮಕ್ಕಳಲ್ಲೂ ಇದೆ. ಎಸ್‌ಸಿ/ಎಸ್‌ಟಿಯಲ್ಲಿ ಬಡತನ ಪ್ರಮಾಣ ಹೆಚ್ಚಿರುವುದರಿಂದ ಸಮಸ್ಯೆ ಕೂಡ ಈ ವರ್ಗದಲ್ಲಿ ಸ್ವಲ್ಪ ಹೆಚ್ಚಿದೆ’ ಎಂದು ಕಾರಣ ಕೊಡುತ್ತಾರೆ ನಿವೃತ್ತ ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.