ADVERTISEMENT

ಗಮನ ಸೆಳೆದ ಶ್ವಾನ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 15:25 IST
Last Updated 9 ಫೆಬ್ರುವರಿ 2020, 15:25 IST
ರಾಜ್ಯಮಟ್ಟದ ಪಶು ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಹತ್ತಿರದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನದಲ್ಲಿ ವಿಜೇತ ಶ್ವಾನಗಳು
ರಾಜ್ಯಮಟ್ಟದ ಪಶು ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಹತ್ತಿರದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನದಲ್ಲಿ ವಿಜೇತ ಶ್ವಾನಗಳು   

ಜನವಾಡ: ರಾಜ್ಯಮಟ್ಟದ ಪಶು ಮೇಳದ ಪ್ರಯುಕ್ತ ಬೀದರ್ ತಾಲ್ಲೂಕಿನ ಕಮಠಾಣ ಬಳಿಯ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನ ಗಮನ ಸೆಳೆಯಿತು.

ವೇದಿಕೆಯ ಮುಂಭಾಗದಲ್ಲಿ ನಡೆದ ಪ್ರದರ್ಶನವನ್ನು ನೋಡಲು ಜನ ಮುಗಿಬಿದ್ದರು. ಅನೇಕರು ಕುರ್ಚಿಗಳನ್ನು ಏರಿ ವಿವಿಧ ತಳಿಗಳ ನಾಯಿಗಳನ್ನು ಕಣ್ತುಂಬಿಕೊಂಡರು.

ನಾಯಿ ಮರಿಗಳ ವಿಭಾಗದ ಸ್ಪರ್ಧೆಯಲ್ಲಿ ಸಂಜಯ ಖೇಣಿ ಅವರ ಕಕೇರಿಯನ್ ಶಫರ್ಡ್ ತಳಿಯ ಆರು ತಿಂಗಳ ಮರಿ ₹1 ಸಾವಿರದ ಮೊದಲ ಬಹುಮಾನ ಗಳಿಸಿತು.

ADVERTISEMENT

ದೊಡ್ಡ ನಾಯಿಗಳ ವಿಭಾಗದಲ್ಲಿ ಮುಧೋಳ ತಳಿಯ ಗಂಡು ನಾಯಿ ಪ್ರಥಮ, ರೊಟ್ಟವೇಲರ್ ತಳಿಯ ನಾಯಿ ದ್ವಿತೀಯ, ಸಂಜಯ ಖೇಣಿ ಅವರ ಫಿಲಾ ಬ್ರೆಜಿಲೆರೊ ತಳಿಯ ನಾಯಿ ತೃತೀಯ, ಬೀದರ್ ವಾಯುಪಡೆ ತರಬೇತಿ ಕೇಂದ್ರದ ಫರ್ನಾಂಡೀಸ್ ಅವರ ಜರ್ಮನ್ ಶಫರ್ಡ್ ತಳಿಯ ನಾಯಿ ನಾಲ್ಕನೇ ಹಾಗೂ ಮುಧೋಳ ತಳಿಯ ಹೆಣ್ಣು ನಾಯಿ ಐದನೇ ಬಹುಮಾನ ಪಡೆಯಿತು.

ಪ್ರಥಮ, ದ್ವಿತೀಯ, ತೃತೀಯ, ನಾಲ್ಕನೇ ಹಾಗೂ ಐದನೇ ಬಹುಮಾನವಾಗಿ ಕ್ರಮವಾಗಿ ₹5 ಸಾವಿರ, ₹4 ಸಾವಿರ, ₹3 ಸಾವಿರ, ₹2 ಸಾವಿರ ಹಾಗೂ ₹1 ಸಾವಿರ ಮತ್ತು ಟ್ರೋಫಿ ಕೊಡಲಾಯಿತು.

ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಬಹುಮಾನ ವಿತರಿಸಿದರು. ಸಂಸದ ಭಗವಂತ ಖೂಬಾ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.