ಔರಾದ್: ತಾಲ್ಲೂಕಿನ ಎಕಂಬಾ ಗ್ರಾಮದ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಅಪಾರ ಸಂಖ್ಯೆ ಭಕ್ತರ ನಡುವೆ ಭಾನುವಾರ ಹರಿನಾಮ ಸಪ್ತಾಹ ಸಮಾರೋಪ ನಡೆಯಿತು.
ಕರಣ ಗಜೇಂದ್ರ ಭಾರತಿ ಮಹಾರಾಜ, ಅವಧೂತ ಆನಂದ ಮಹಾರಾಜರ ನೇತೃತ್ವದಲ್ಲಿ ಒಂದು ವಾರ ಕಾಲ ನಡೆದ ಭಜನೆ, ಕೀರ್ತನೆಯಲ್ಲಿ ಭಕ್ತರು ಮಿಂದೆದ್ದು ಭಕ್ತಿ ಭಾವ ಮೆರೆದರು.
‘ಭಾರತೀಯ ಸಂಸ್ಕೃತಿಯಲ್ಲಿ ಪೂಜೆ, ಕೀರ್ತನೆಗಳಿಗೆ ವಿಶೇಷ ಅರ್ಥವಿದೆ. ಇಂತಹ ಆಧುನಿಕ ಯುಗದಲ್ಲೂ ಜನರು ಧಾರ್ಮಿಕ ಕಾರ್ಯಕ್ರಮಗಳ ಕಡೆ ಮುಖ ಮಾಡಿದ್ದಾರೆ’ ಎಂದು ಕರಣ ಗಜೇಂದ್ರ ಭಾರತಿ ಮಹಾರಾಜ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಪ್ರಭು ಚವಾಣ್ ಮಾತನಾಡಿ, ‘ಸಮಾಜದಲ್ಲಿ ಶಾಂತಿ, ಸಮಾಧಾನ, ಸಮೃದ್ಧಿಗಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ನಮ್ಮ ತಾಲ್ಲೂಕಿನ ಗಡಿಭಾಗ ಬಹು ಸಂಸ್ಕೃತಿಯ ತವರೂರು’ ಎಂದರು.
ಮುಖಂಡ ರಮೇಶ ಉಪಾಸೆ, ಹರಿ ಕೊಂಡಾಪೂರೆ, ಯೋಗೇಶ್ ಸುರನಾರ, ರಾಮರಾವ ಪಾಟೀಲ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.