ADVERTISEMENT

ಹಿರಿಯ ನಾಗರಿಕರು ಮಾರ್ಗದರ್ಶಕರಾಗಲಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 13:59 IST
Last Updated 10 ಜನವರಿ 2021, 13:59 IST
ಬೀದರ್‌ನಲ್ಲಿ ನಡೆದ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಕೊರೊನಾ ನಂತರದ ಸ್ನೇಹ ಮಿಲನ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ. ದೇವೇಂದ್ರ ಕಮಲ್ ಉದ್ಘಾಟಿಸಿದರು
ಬೀದರ್‌ನಲ್ಲಿ ನಡೆದ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಕೊರೊನಾ ನಂತರದ ಸ್ನೇಹ ಮಿಲನ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಪ್ರೊ. ದೇವೇಂದ್ರ ಕಮಲ್ ಉದ್ಘಾಟಿಸಿದರು   

ಬೀದರ್: ಹಿರಿಯ ನಾಗರಿಕರು ತಮ್ಮ ಅನುಭವ ಬಳಸಿಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ದೇವೇಂದ್ರ ಕಮಲ್ ಸಲಹೆ ಮಾಡಿದರು.

ನಗರದ ಬಿ.ವಿ.ಬಿ. ಕಾಲೇಜಿನಲ್ಲಿ ನಡೆದ ಜೈ ಹಿಂದ್ ಹಿರಿಯ ನಾಗರಿಕರ ಸಂಘದ ಕೊರೊನಾ ನಂತರದ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರಿಯ ನಾಗರಿಕರು ಜೀವನೋತ್ಸಾಹ ಕಾಯ್ದುಕೊಳ್ಳಬೇಕು. ಆರೋಗ್ಯವಂತರಾಗಿ ಬಾಳಬೇಕು ಎಂದು ಹೇಳಿದರು.

ADVERTISEMENT

ಯುವಕರು ಸೇರಿದಂತೆ ಸಮಾಜದ ಎಲ್ಲರೂ ಹಿರಿಯ ನಾಗರಿಕರ ಚಲನವಲನ ಹಾಗೂ ನಡತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಆರ್.ಆರ್. ಮುನಿಗ್ಯಾಲ್, ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ್, ಕೋಶಾಧ್ಯಕ್ಷ ಗಂಗಪ್ಪ ಸಾವಳೆ, ಜಂಟಿ ಕಾರ್ಯದರ್ಶಿ ಎಸ್.ಆರ್. ಬಂಟಿ, ಶಿವಪುತ್ರ ಮೆಟಗೆ, ಅರವಿಂದ ಕುಲಕರ್ಣಿ, ಡಾ. ವಿ.ವಿ. ಗುತ್ತಿ, ನಾರಾಯಣರಾವ್ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.