ADVERTISEMENT

ಔರಾದ್: ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕಾಮಗಾರಿ ಪರಿಶೀಲಿಸಿದ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:20 IST
Last Updated 24 ನವೆಂಬರ್ 2025, 6:20 IST
ಔರಾದ್ ತಾಲ್ಲೂಕಿನ ಹೆಡಗಾಪುರದ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕಾಮಗಾರಿಯನ್ನು ಶಾಸಕ ಪ್ರಭು ಚವಾಣ್ ಪರಿಶೀಲಿಸಿದರು
ಔರಾದ್ ತಾಲ್ಲೂಕಿನ ಹೆಡಗಾಪುರದ ಜಾನುವಾರು ತಳಿ ಸಂವರ್ಧನಾ ಕೇಂದ್ರದ ಕಾಮಗಾರಿಯನ್ನು ಶಾಸಕ ಪ್ರಭು ಚವಾಣ್ ಪರಿಶೀಲಿಸಿದರು   

ಔರಾದ್: ತಾಲ್ಲೂಕಿನ ಹೆಡಗಾಪುರದಲ್ಲಿ ₹ 34.49 ಕೋಟಿ ಮೊತ್ತದಲ್ಲಿ ನಿರ್ಮಾಣ ಆಗುತ್ತಿರುವ ಜಾನುವಾರು ತಳಿ ಸಂವರ್ಧನಾ ಮತ್ತು ರೈತ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಶಾಸಕ ಪ್ರಭು ಚವಾಣ್ ಈಚೆಗೆ ವೀಕ್ಷಿಸಿದರು.

ರೈತರ ತರಬೇತಿ ಕೇಂದ್ರ, ಜಾನುವಾರು ಹಾಗೂ ಕೋಳಿ ಸಂವರ್ಧನಾ ಕೇಂದ್ರದ ಕಟ್ಟಡ ಕಾಮಗಾರಿ ವೀಕ್ಷಿಸಿ ಸರಿಯಾಗಿ ನೀರು ಸಿಂಪಡಣೆ ಮಾಡಬೇಕು. ಸಿಮೆಂಟ್ ಸೇರಿದಂತೆ ಎಲ್ಲ ಸಾಮಗ್ರಿಗಳು ಗುಣಮಟ್ಟದಿಂದ ಕೂಡಿರಬೇಕು. ಸಂಬಂಧಿತ ಅಧಿಕಾರಿಗಳು ಪದೇ ಪದೇ ಮೇಲ್ವಿಚಾರಣೆ ಮಾಡಬೇಕು. ಕ್ರಿಯಾಯೋಜನೆ ಪ್ರಕಾರ ಕಾಮಗಾರಿ ಆಗದಿದ್ದರೆ, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ತಮ್ಮ ಸರ್ಕಾರವಿದ್ದಾಗ ದೊಡ್ಡ ಯೋಜನೆ ಮಂಜೂರುಗೊಳಿಸಲಾಗಿದೆ. ಈ ಕೆಲಸ ಪೂರ್ಣವಾದರೆ ಜಿಲ್ಲೆಯ ರೈತರಿಗೆ ತುಂಬಾ ಅನುಕೂಲವಾಗಲಿದೆ. ಜಾನುವಾರು ಹೊಸ ತಳಿ ಅಭಿವೃದ್ಧಿ, ಹಾಲು ಉತ್ಪಾದನೆ ಸೇರಿದಂತೆ ಜಿಲ್ಲೆಯ ರೈತರಿಗೆ ಮಾಹಿತಿ ಹಾಗೂ ನೆರವು ಸಿಗಲಿದೆ. ಇಲ್ಲಿ ಜಿಲ್ಲಾ ಮಟ್ಟದ ಗೋ ಶಾಲೆಯೂ ಆಗಲಿದೆ’ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ಗೃಹ ಮಂಡಳಿ ಹಿರಿಯ ಅಧಿಕಾರಿ ವಿಜಯಕುಮಾರ ಶಶಿಕುಮಾರ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶ್ರೀಮಂತ ಪಾಟೀಲ ಹೆಡಗಾಪುರ, ಶಿವಾಜಿರಾವ ಕಾಳೆ, ಸಚಿನ ರಾಠೋಡ, ಕೇರಬಾ ಪವಾರ, ಶಿವರಾಜ ಅಲ್ಮಾಜೆ, ರಾಜಕುಮಾರ ಸೋರಾಳೆ, ಶಿವಲಿಂಗ ಚಿಟ್ಟಾ, ಶಿವಕುಮಾರ ಪಾಂಚಾಳ, ನಾಗಶೆಟ್ಟಿ ಗಾದಗೆ, ಅನೀಲ ಮುಸ್ತಾಪೂರ, ಮನೋಹರ ಬೋಗಾರ, ಹಣಮಂತ ಯರನಳ್ಳೆ, ಬಸವರಾಜ ಗಂಜೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.