ಭಾಲ್ಕಿ: ಕನ್ನಡದ ಜೀ ವಾಹಿನಿಯ ಮಹಾನಟಿ ಸೀಜನ್ 2ರ ಸ್ಪರ್ಧೆಗೆ ಆಯ್ಕೆಯಾಗಿರುವ ದಿವ್ಯಾಂಜಲಿ ಅವರನ್ನು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬುಧವಾರ ಬೆಂಗಳೂರಿನಲ್ಲಿ ಸನ್ಮಾನಿಸಿದರು.
‘ಗಡಿ ಜಿಲ್ಲೆ ಬೀದರ್‌ನಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ ಎನ್ನುವುದಕ್ಕೆ ದಿವ್ಯಾಂಜಲಿ ಸಾಕ್ಷಿಯಾಗಿದ್ದಾರೆ. ಉತ್ತಮ ಅವಕಾಶ, ಸೂಕ್ತ ವೇದಿಕೆ ಲಭಿಸಿದರೆ ಗಡಿಭಾಗದ ಮಕ್ಕಳಲ್ಲಿ ಹುದುಗಿರುವ ಸೂಪ್ತ ಪ್ರತಿಭೆ ಹೊರ ಬರಲಿದೆ’ ಎಂದರು.
‘ಬಸವಲಿಂಗ ಪಟ್ಟದ್ದೇವರು ಬಡವರು, ಅನಾಥ ಮಕ್ಕಳ ಸೇವೆಯಲ್ಲಿ ಬಸವಣ್ಣನವರನ್ನು ಕಾಣುತ್ತಿದ್ದಾರೆ. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಕರೆತಂದು ಅನ್ನ, ಅಕ್ಷರ, ಆಶ್ರಯ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಅದರಲ್ಲಿ ದಿವ್ಯಾಂಜಲಿ ಕೂಡ ಒಬ್ಬರಾಗಿದ್ದು, ಪಟ್ಟದ್ದೇವರ ಆಶೀರ್ವಾದಿಂದ ಉತ್ತಮ ಶಿಕ್ಷಣ, ಸಂಸ್ಕಾರ ಪಡೆದಿರುವ ದಿವ್ಯಾಂಜಲಿ ಕಲೆಯನ್ನು ಆರಾಧಿಸುತ್ತಿದ್ದಾಳೆ’ ಎಂದು ಹೇಳಿದರು.
ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಆಡಳಿತಾಧಿಕಾರಿ ಮೋಹನ ರೆಡ್ಡಿ, ಗಿರೀಶ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.