ಭಾಲ್ಕಿ: ಲಾಕ್‌ಡೌನ್ ಆದ ನಂತರ ಸರಿಯಾಗಿ ಊಟ ಸಿಗದೆ ಹೋಟೆಲ್ ಕಾರ್ಮಿಕರೊಬ್ಬರು ಪಟ್ಟಣದ ಝರಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಾಂಧಿ ವೃತ್ತ ಸಮೀಪ ಉಡುಪಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕುಂದಾಪುರ ಮೂಲದ ಭಾಸ್ಕರ್(41) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಸ್ಕರ್ ಅವರಿಗೆ ಮದ್ಯದ ಚಟ ಇತ್ತು. ಹೋಟೆಲ್ ಬಂದ್ ಆದ ಮೇಲೆ ಊಟದ ಸಮಸ್ಯೆ ಎದುರಾಗಿತ್ತು. ಅವರ ಬಳಿಯೂ ಹಣ ಇರಲಿಲ್ಲ. ಒಬ್ಬರೇ ವಾಸವಾಗಿದ್ದ ಅವರಿಗೆ ಯಾರು ಸಂಬಂಧಿಗಳೂ ಇಲ್ಲ. ಹಸಿನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಭಾಸ್ಕರ್ ಮೊನ್ನೆ ರಾತ್ರಿ ಬಾವಿಗೆ ಹಾರಿರುವ ಸಾಧ್ಯತೆ ಇದೆ. ಇವತ್ತು ಬೆಳಗಿನ ಜಾವ ಶವ ಬಾವಿಯಲ್ಲಿ ತೇಲುತ್ತಿತ್ತು. ಪೊಲೀಸರು ಶವವನ್ನು ಹೊರಗೆ ತೆಗೆದಿದ್ದಾರೆ. ಭಾಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.