ADVERTISEMENT

‘ಬಿತ್ತನೆ ಬೀಜ ವಿತರಣೆ ಕೇಂದ್ರ ಹೆಚ್ಚಿಸಿ’

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:16 IST
Last Updated 13 ಮೇ 2022, 2:16 IST
ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಣೆ ಕೇಂದ್ರ ಹೆಚ್ಚಿಸಬೇಕೆಂದು ಒತ್ತಾಯಿಸಿ ಕಮಲನಗರ ಪಟ್ಟಣದಲ್ಲಿ ಗುರುವಾರ ರೈತ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ರಮೇಶ ಪೆದ್ದೇ ಅವರಿಗೆ ಮನವಿ ಸಲ್ಲಿಸಿದರು
ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಣೆ ಕೇಂದ್ರ ಹೆಚ್ಚಿಸಬೇಕೆಂದು ಒತ್ತಾಯಿಸಿ ಕಮಲನಗರ ಪಟ್ಟಣದಲ್ಲಿ ಗುರುವಾರ ರೈತ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ರಮೇಶ ಪೆದ್ದೇ ಅವರಿಗೆ ಮನವಿ ಸಲ್ಲಿಸಿದರು   

ಕಮಲನಗರ: ಮುಂಗಾರು ಹಂಗಾಮು ಬಿತ್ತನೆ ಬೀಜ ವಿತರಣೆ ಕೇಂದ್ರ ಹೆಚ್ಚಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ
ಪತ್ರವನ್ನು ತಹಶೀಲ್ದಾರ್ ರಮೇಶ ಪೆದ್ದೇ ಅವರಿಗೆ
ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚು ಗ್ರಾಮಗಳಿರುವುದರಿಂದ ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಬೀಜ ಸಿಗಲಿಲ್ಲ. 2022–2023ನೇ ಸಾಲಿನಲ್ಲಿ ಬೀಜ ವಿತರಣೆ ಕೇಂದ್ರ ಹೆಚ್ಚಿಸಿ, ಕಳೆದ ವರ್ಷವಾದ ತೊಂದರೆ ತಪ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಮನವಿ
ಮಾಡಿದರು.

ಮನವಿ ಸಲ್ಲಿಕೆ ವೇಳೆ ಮನೋಹರ ಬಿರಾದಾರ ಹೊರಂಡಿಕರ್, ವಿಜಯಕುಮಾರ ತಪಸ್ಯಾಳೆ, ಶ್ರೀರಂಗ ಪರಿಹಾರ, ವಿಠ್ಠಲ ಪಾಟೀಲ, ಪಿ.ಡಿ.ಪಾಟೀಲ, ಹಣಮಂತ ಬಿರಾದಾರ, ಸಂಗಮೇಶ್ವರ ಶಿವಕುಮಾರ ಸೇರಿದಂತೆ ರೈತರು, ರೈತ ಸಂಘದ ಮುಖಂಡರು
ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.