ADVERTISEMENT

ಸಂಗೀತದಿಂದ ಮಾನಸಿಕ ನೆಮ್ಮದಿ: ಶಾಸಕ ಕಾಶೆಂಪುರ

ಬಾವಗಿಯಲ್ಲಿ ತಾಲ್ಲೂಕುಮಟ್ಟದ ಜಾನಪದ ಸಂಗೀತೋತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 16:01 IST
Last Updated 5 ಡಿಸೆಂಬರ್ 2022, 16:01 IST
ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ನಡೆದ ತಾಲ್ಲೂಕುಮಟ್ಟದ ಜಾನಪದ ಸಂಗೀತೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಶಾಸಕ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿದರು
ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ನಡೆದ ತಾಲ್ಲೂಕುಮಟ್ಟದ ಜಾನಪದ ಸಂಗೀತೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಶಾಸಕ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿದರು   

ಜನವಾಡ: ಸಂಗೀತ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಶಾಸಕ ಬಂಡೆಪ್ಪ ಕಾಶೆಂಪುರ ಹೇಳಿದರು.

ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ರೇವಣಸಿದ್ಧೇಶ್ವರ ಕಲಾ, ಸಾಂಸ್ಕøತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕುಮಟ್ಟದ ಜಾನಪದ ಸಂಗೀತೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ ಎಂದು ನುಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು. ಕಲಾವಿದರಾದ ಶಿವಕುಮಾರ ಪಾಂಚಾಳ, ಸಂಜುಕುಮಾರ ಸ್ವಾಮಿ, ಅಶ್ವಿನಿ ಆರ್. ಸ್ವಾಮಿ, ವಚನಶ್ರೀ, ಶಿವಲೀಲಾ ಎಸ್. ಸ್ವಾಮಿ, ಶಿವರುದ್ರಯ್ಯ ಸಾಲಿಮಠ, ಚನ್ನಬಸಪ್ಪ ನೌಬಾದೆ, ಪುಂಡಲೀಕ್ ಪಾಟೀಲ, ಗುರುದಾಸ ಸ್ವಾಮಿ, ರಾಜಕುಮಾರ ಸ್ವಾಮಿ ಗಾಯನ ಪ್ರಸ್ತುತಪಡಿಸಿದರು. ರಾಚಯ್ಯ ಸ್ವಾಮಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಶ್ರದ್ಧಾ ಪಾಟೀಲ ಪ್ರದರ್ಶಿಸಿದ ಭರತ ನಾಟ್ಯ ಗಮನ ಸೆಳೆಯಿತು. ನಿರ್ಮಲಾ ಶಂಭು, ಪುತಳಾಬಾಯಿ ಹಾಗೂ ತಂಡದವರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪಂಡಿತಾರಾಧ್ಯ ಶಿವಾಚಾರ್ಯ, ಶಂಕರಲಿಂಗ ಮಹಾರಾಜ, ಮುರುಗೇಂದ್ರ ದೇವರು, ಬಾಲಸಂಗಯ್ಯ ಸ್ವಾಮಿ, ಶಿವಕುಮಾರ ಸ್ವಾಮಿ, ಭದ್ರಯ್ಯ ಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ, ಚನ್ನಮಲ್ಲಪ್ಪ ಹಜ್ಜರಗಿ, ರೇವಣಪ್ಪ ಭದ್ರಣ್ಣ, ಕಂಟೆಪ್ಪ ಹೊನ್ನಿಕೇರಿ, ಸನ್ಮುಖ ಸ್ವಾಮಿ, ಸಂಗಮೇಶ ಹಜ್ಜರಗಿ, ಗುಂಡಯ್ಯ ಸ್ವಾಮಿ ಇದ್ದರು.

ADVERTISEMENT

ಸಂಘದ ಅಧ್ಯಕ್ಷ ಶಾಂತಕುಮಾರ ಸ್ವಾಮಿ ಬಾವಗಿ ಸ್ವಾಗತಿಸಿದರು. ಸಿದ್ಧಾರೂಢ ಭಾಲ್ಕೆ ನಿರೂಪಿಸಿದರು. ಲೋಕೇಶ ಕನಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.