
ಬೀದರ್: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಚಂದ್ರಪ್ಪ, ಮಾಜಿಸಚಿವ ಎಚ್. ಆಂಜನೇಯ ಅವರು 20 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿದ ಪ್ರಸಂಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಡೆಯಿತು.
ಮಾಜಿಸಚಿವ ಭೀಮಣ್ಣ ಖಂಡ್ರೆ ಅವರ ಆರೋಗ್ಯ ಕ್ಷೀಣಿಸಿದ್ದರಿಂದ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಅಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಬಂದಿದ್ದ ಮುನಿಯಪ್ಪ, ಆಂಜನೇಯ, ಚಂದ್ರಪ್ಪ ಹಾಗೂ ಇತರರು ಲಿಫ್ಟ್‌ನಲ್ಲಿ ಹೋಗುವಾಗ ಮಧ್ಯದಲ್ಲಿಯೇ ಅದು ಕೈಕೊಟ್ಟಿದೆ. ಸುಮಾರು 20 ನಿಮಿಷಗಳ ನಂತರ ಲಿಫ್ಟ್ ಆಪರೇಟರ್‌ಗಳು ಬಂದು ಸರಿಪಡಿಸಿದರು.
ಆನಂತರ ಅವರು ಭೀಮಣ್ಣಾ ಖಂಡ್ರೆ ಅವರನ್ನು ದಾಖಲಿಸಿರುವ ವಿಶೇಷ ವಾರ್ಡ್‌ಗೆ ತೆರಳಿ, ಯೋಗಕ್ಷೇಮ ವಿಚಾರಿಸಿದರು. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಜನ ಲಿಫ್ಟ್‌ನಲ್ಲಿ ಸೇರಿದ್ದರಿಂದ ಲಿಫ್ಟ್ ಕಾರ್ಯನಿರ್ವಹಿಸಲಿಲ್ಲ ಎಂದು ಆಸ್ಪತ್ರೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸಚಿವ ಕೆ.ಎಚ್. ಮುನಿಯಪ್ಪ ಅವರು ಲಿಫ್ಟ್‌ನಲ್ಲಿ ಸಿಲುಕಿಕೊಂಡಾಗ ಅದರ ಎದುರು ಅವರ ಬೆಂಬಲಿಗರು ಜಮಾಯಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.