ADVERTISEMENT

ಬ್ರಿಮ್ಸ್ ಲ್ಯಾಬ್ ಟೆಕ್ನಿಶಿಯನ್ ಆತ್ಮಹತ್ಯೆ ಯತ್ನ: ಕಾನೂನು ಕ್ರಮಕ್ಕೆ ಸಚಿವ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 5:55 IST
Last Updated 2 ಮಾರ್ಚ್ 2026, 5:55 IST
ಪೌರಾಡಳಿತ ಸಚಿವ ರಹೀಂ ಖಾನ್‌ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಶಿಯನ್‌ ನಿಲೋಫರ್‌ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು
ಪೌರಾಡಳಿತ ಸಚಿವ ರಹೀಂ ಖಾನ್‌ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಶಿಯನ್‌ ನಿಲೋಫರ್‌ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು    

ಬೀದರ್‌: ನಗರದ ಬ್ರಿಮ್ಸ್‌ ಲ್ಯಾಬ್‌ ಟೆಕ್ನಿಶಿಯನ್‌ ನಿಲೋಫರ್‌ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

‘ಯುವತಿಗೆ ಐದಾರು ತಿಂಗಳಿಂದ ವೇತನ ಪಾವತಿಸಿಲ್ಲ. ಮಾನಸಿಕ ಹಿಂಸೆ ನೀಡಿ, ಕೊಲೆಗೂ ಯತ್ನಿಸಲಾಗಿದೆ’ ಎಂಬ ಆರೋಪ ಇದೆ. ಫೆ. 27ರಂದು ಯುವತಿ 15 ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದರು. ಬಳಿಕ ಅವರನ್ನು ಬ್ರಿಮ್ಸ್‌ಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.

ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ರಹೀಂ ಖಾನ್‌ ಅವರು, ಯುವತಿಗೆ ವೈಯಕ್ತಿಕವಾಗಿ ₹50 ಸಾವಿರ ಆರ್ಥಿಕ ನೆರವು ನೀಡಿ, ಸಾಂತ್ವನ ಹೇಳಿ ಧೈರ್ಯ ತುಂಬಿದರು.

ADVERTISEMENT

ಘಟನೆ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.

ಮುಗ್ಧರಿಗೆ ಕಿರುಕುಳ ಕೊಡುವ ದುಷ್ಟರ ಗ್ಯಾಂಗ್‌ ಬ್ರಿಮ್ಸ್‌ನಲ್ಲಿದೆ. ಮಹಿಳಾ ನೌಕರರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕರು ದೂರು ಕೊಡಲು ಹಿಂಜರಿಯುತ್ತಿದ್ದಾರೆ ಎಂದು ಸಚಿವರಿಗೆ ವಿವರಿಸಿದರು.

ನಿಲೋಫರ್‌ ಅವರು ತಾಲ್ಲೂಕಿನ ಅಮಲಾಪೂರದ ನಿವಾಸಿಯಾಗಿದ್ದು, ತನ್ನ ತಾಯಿಯೊಂದಿಗೆ ಚೌಬಾರದಲ್ಲಿ ವಾಸಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.