ADVERTISEMENT

ಯುವಕರು ದುಶ್ಚಟದಿಂದ ದೂರವಿರಿ: ಶಾಸಕ ಈಶ್ವರ ಖಂಡ್ರೆ

ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 9:58 IST
Last Updated 1 ಮಾರ್ಚ್ 2020, 9:58 IST
ಭಾಲ್ಕಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು ಇದ್ದರು
ಭಾಲ್ಕಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು ಇದ್ದರು   

ಭಾಲ್ಕಿ: ಯುವಕರು ದುಶ್ಟಟ, ದುರ್ಗುಣಗಳಿಗೆ ಬಲಿಯಾಗದೇ ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ ಮತ್ತು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ನ ವತಿಯಿಂದ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಮೆರಿಕಾ, ಫ್ರಾನ್ಸ್ ಸೇರಿದಂತೆ ಮುಂತಾದ ರಾಷ್ಟ್ರಗಳಲ್ಲಿ ನಮ್ಮ ದೇಶದ ಯುವಕರು ವೈದ್ಯ, ವಿಜ್ಞಾನಿಗಳಾಗಿ ಸೇವೆ ಸಲ್ಲಿಸುತ್ತ ಅದ್ಭುತ ಕೊಡುಗೆ ನೀಡುತ್ತಿದ್ದಾರೆ. ಆದರೆ ಇಂದು ಹೃದಯ, ಬಿಪಿಯಂತಹ ರೋಗಗಳು ಕಾಣಿಸಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಯುವ ಜನಾಂಗ ದುಶ್ಚಟದ ದಾಸರಾ ಗುತ್ತಿರುವುದು ಆತಂಕ ಮೂಡಿಸಿದೆ. ಹಣ, ಸಂಪತ್ತು ಹೇಗಾದರೂ ಮಾಡಿ ಗಳಿಸಬಹುದು. ಆದರೆ ಆರೋಗ್ಯ ಹಾಳಾದರೇ ಜೀವನದ ಲ್ಲಿ ಎಲ್ಲವೂ ಕಳೆದು ಕೊಂಡಂತಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿ ರೋಹಿಣಿ ಕೆ.ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ವ್ಯಸನದ ವಿರುದ್ಧ ಸಮರ ಸಾರಿದ್ದಾರೆ. ಯುವಶಕ್ತಿ ದುಶ್ವಟಗಳಿಂದ ದೂರ ಉಳಿದು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಮಾತನಾಡಿ, ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ. ಆದರೆ, ಬದುಕುವ ರೀತಿ ನಮ್ಮ ಕೈಯಲ್ಲಿದೆ. ಹಾಗಾಗಿ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಬಾರದು ಎಂದರು.

ಗುರುಬಸವ ಪಟ್ಟದ್ದೇವರು ಮಾತನಾಡಿ, ವ್ಯಕ್ತಿಯ ಜೀವ ಹಾಗೂ ಜೀವನ ಅತ್ಯಂತ ಅಮೂಲ್ಯವಾಗಿದೆ. ಹಾಗಾಗಿ ದೇಶದ ಭವಿಷ್ಯ ಆಗಿರುವ ಯುವಶಕ್ತಿ ಉತ್ಸಾಹ, ಜೀವನ ಹಾಳಾಗ ಬಾರದು ಎನ್ನುವ ಉದ್ದೇಶದೊಂದಿಗೆ ಜನಜಾಗೃತಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ನಿಮಾನ್ಸ್‍ನ ಮನೋರೋಗ ತಜ್ಞ ಡಾ.ಸಿ.ಆರ್.ಚಂದ್ರಶೇಖರ್, ಪೊಲೀಸ್ ಇಲಾಖೆಯ ಎಸಿಪಿ ನಾರಾಯಣಸ್ವಾಮಿ ಕೆ.ಎನ್ ವಿಶೇಷ ಉಪನ್ಯಾಸ ನೀಡಿದರು.

ಮಹಾಲಿಂಗ ಸ್ವಾಮೀಜಿ, ಜಯದೇವ ಸ್ವಾಮೀಜಿ, ಸಮಾಜ ಸೇವಕ ಹೀರಾಚಂದ ವಾಘ್ಮಾರೆ, ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ ಎಸ್, ಸೋಮನಾಥಪ್ಪ ಅಷ್ಟೂರೆ, ನವಲಿಂಗ ಪಾಟೀಲ, ಶಿವಾನಂದ ಗುಂದಗೆ, ಸಿಕ್ರೇಶ್ವರ ಶೆಟಕಾರ್, ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ ಆಡಳಿತಾಧಿಕಾರಿ ಮೋಹನ ರೆಡ್ಡಿ ಇದ್ದರು.

ವೀರಣ್ಣ ಕುಂಬಾರ್ ನಿರೂಪಿಸಿ, ವಂದಿಸಿದರು. ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಯುವಕರಿಂದ ಜನಜಾಗೃತಿ ರ್‍ಯಾಲಿ ಹಾಗೂ ಮಹಾತ್ಮ ಗಾಂಧಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಪೊಲೀಸ್ ಇಲಾಖೆಯ ಎಸಿಪಿ ನಾರಾಯಣಸ್ವಾಮಿ ಕೆ.ಎನ್. ಚಾಲನೆ ನೀಡಿದರು.

ವಿಜೇತರಿಗೆ ಬಹುಮಾನ: ‘ಯುವಶಕ್ತಿ ಬೆಳಕಿನಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣ’ ಎಂಬ ವಿಷಯ ಕುರಿತಾಗಿ ನಡೆಸಿದ ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಷಣ : ಮೈಪಾಲರೆಡ್ಡಿ ಸಂತೋಷ (ಪ್ರಥಮ), ಪಲ್ಲವಿ ಸಿದ್ದಲಿಂಗಯ್ಯ (ದ್ವಿತೀಯ), ಸಚೀನ ಶಿವಶಂಕರ (ತೃತೀಯ) ಮತ್ತು ಶರಣಕುಮಾರ ಶಾಂತಗೌಡ (ಸಮಾಧಾನಕರ), ಪ್ರಬಂಧ : ಉಷಾರಾಣಿ ಬಸಯ್ಯ(ಪ್ರಥಮ), ತ್ರಿವೇಣಿ (ದ್ವಿತೀಯ) ಮತ್ತು ಸುಮನ ಮಾರುತಿ(ತೃತೀಯ), ಚಿತ್ರಕಲೆ : ವಿಜಯ ಅನೀಲ(ಪ್ರಥಮ), ವೈಶಾಲಿ ವೈಜಿನಾಥ(ದ್ವಿತೀಯ) ಮತ್ತು ಅಕ್ಷತಾ ಭೀಮಶೆಟ್ಟಿ(ತೃತೀಯ) ಸ್ಥಾನ ಪಡೆದು ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.