
ಚಿಟಗುಪ್ಪ (ಹುಮನಾಬಾದ್): ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ಈಚೆಗೆ ಹಾವು ಕಡಿದು ಮತ್ತು ಬಾವಿಯಲ್ಲಿ ಬಿದ್ದು ಮೃತಪಟ್ಟವರ ಮನೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು.
ನಂತರ ಮಾತನಾಡಿದ ಅವರು, ಗ್ರಾಮದ ಶಾರದಾ ಎಂಬುವವರು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಡಿದು ಮೃತಪಟ್ಟಿದ್ದರು. ಸೈಯದ್ ಶಾ ಅವರು ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ತಲಾ 5 ಸಾವಿರ ವೈಯಕ್ತಿಕ ಸಹಾಯಧನ ನೀಡಿದರು. ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಂತೋಷ್ ರೆಡ್ಡಿ, ಸಂತೋಷ್ ಭೂಸನೂರ, ಶಣ್ಮುಕಪ್ಪ ಖಾಶೆಂಪುರ, ಮಹೇಶ್ ಸಾಗರ್, ಗಣಪತಿ ಎಲಜೇರಿ, ಮಂಜುನಾಥ ಬಂಮಗೊಂಡ, ದಶರಥ ಬಿರಾದಾರ, ಸಂತೋಷ ಕಾಟೆ, ನಾಗಶೆಟ್ಟಿ ಬಿರಾದಾರ, ಶಾಮಸುಂದರ ರೇಕುಳಗಿ, ಸುಜಾತಾ ಮಂದಾ, ಗಣೇಶ್ ಗಾರಂಪಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.