
ಜನವಾಡ: ಸಾಲಬಾಧೆಯಿಂದ ಆತ್ಮಹತ್ಯೆ ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಹಾವು ಕಡಿದು ಮೃತಪಟ್ಟ ರೈತರ ಕುಟುಂಬಗಳಿಗೆ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಬೀದರ್ ತಮ್ಮ ಕಚೇರಿಯಲ್ಲಿ ಸೋಮವಾರ ಪರಿಹಾರ ಚೆಕ್ ವಿತರಿಸಿದರು.
ಆತ್ಮಹತ್ಯೆಗೆ ಶರಣಾದ ಬಶಿರಾಪುರದ ಬಾಬು ಅವರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ₹ 5 ಲಕ್ಷ ಹಾಗೂ ಹಾವು ಕಡಿದು ಮೃತಪಟ್ಟ ಹೊನ್ನಿಕೇರಿಯ ರವೀಂದ್ರ ಅವರ ಕುಟುಂಬಕ್ಕೆ ₹2 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು.
‘ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಆತ್ಮಹತ್ಯೆ ದಾರಿ ತುಳಿಯದಂತೆ ರೈತರಲ್ಲಿ ಆತ್ಮವಿಶ್ವಾಸ ತುಂಬಬೇಕು’ ಎಂದು ಸಲಹೆ ನೀಡಿದರು. ಪ್ರಮುಖರಾದ ಸುರೇಶ ಮಾಶೆಟ್ಟಿ, ಬಸವರಾಜ ಚಟ್ನಳ್ಳಿ, ಪುಂಡಲೀಕ ಟುಬಾಕ, ಸಚಿನ್ ಕೋಣಿ, ರಾಮು ಅಮಲಾಪುರ, ಬಸವರಾಜ ಹಿಲಾಲಪುರ, ವಿಜಯಪುರ ಗಣಪುರ, ಓಂಕಾರ ಮಜಗೆ, ಸಿದ್ದಯ್ಯ ಸ್ವಾಮಿ, ಗೋಪಾಲ ರೆಡ್ಡಿ, ಪರಮೇಶ ಪಾಟೀಲ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.