ADVERTISEMENT

ಸಮಾನತೆಗಾಗಿ ಹಂಬಲಿಸಿದ್ದ ನಾರಾಯಣಗುರು: ರವೀಂದ್ರಕುಮಾರ ಬೋರೋಳೆ ಅಭಿಮತ

ತಾಲ್ಲೂಕು ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ರವೀಂದ್ರಕುಮಾರ ಬೋರೋಳೆ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 14:13 IST
Last Updated 2 ಸೆಪ್ಟೆಂಬರ್ 2020, 14:13 IST
ಬಸವಕಲ್ಯಾಣದಲ್ಲಿ ಬುಧವಾರ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಆಚರಿಸಲಾಯಿತು
ಬಸವಕಲ್ಯಾಣದಲ್ಲಿ ಬುಧವಾರ ಬ್ರಹ್ಮರ್ಷಿ ನಾರಾಯಣಗುರು ಜಯಂತಿ ಆಚರಿಸಲಾಯಿತು   

ಬಸವಕಲ್ಯಾಣ: ‘ಬ್ರಹ್ಮರ್ಷಿ ನಾರಾಯಣಗುರು ಅವರು ಯಾವುದೇ ಭೇದಭಾವ ಮಾಡದೆ ಎಲ್ಲರದ್ದು ಒಂದೇ ಜಾತಿ, ಒಂದೇ ಧರ್ಮ ಎಂದು ಸಾರಿದ್ದಾರೆ’ ಎಂದು ತಾಲ್ಲೂಕು ಆರ್ಯ ಈಡಿಗ ಸಮಾಜ ಸಂಘದ ಅಧ್ಯಕ್ಷ ರವೀಂದ್ರಕುಮಾರ ಬೋರೋಳೆ ಹೇಳಿದ್ದಾರೆ.

ತಾಲ್ಲೂಕು ಆರ್ಯ ಈಡಿಗ ಸಮಾಜ ಸಂಘದಿಂದ ಬುಧವಾರ ಇಲ್ಲಿ ಆಯೋಜಿಸಿದ್ದ ಬ್ರಹ್ಮರ್ಷಿ ನಾರಾಯಣಗುರು ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ನೀಡಿ ಪ್ರಗತಿಯ ದಾರಿಯಲ್ಲಿ ಸಾಗಬೇಕು. ಕೋವಿಡ್ ಕಾರಣ ಜಯಂತಿಯನ್ನು ಸರಳವಾಗಿ ಅಚರಿಸಲಾಗುತ್ತಿದೆ’ ಎಂದರು.

ADVERTISEMENT

ಸಮಾಜ ಸಂಘದ ನಗರ ಘಟಕದ ಅಧ್ಯಕ್ಷ ಸಂತೋಷ ಗುತ್ತೇದಾರ ಮಾತನಾಡಿ, ‘ನಾರಾಯಣಗುರು ಹಾಗೂ ಇತರೆ ಮಹಾತ್ಮರ ಸಂದೇಶದ ಪಾಲನೆ ಮಾಡಬೇಕು’ ಎಂದರು.

ನಗರಸಭೆ ಆಯುಕ್ತ ಗೌತಮ ಕಾಂಬಳೆ, ಸದಸ್ಯ ರಾಮ ಜಾಧವ, ಸುಶೀಲ ಮುತ್ತೆ, ಅಶೋಕ ತೆಲಂಗ್, ಗುಂಡಣ್ಣ ಬೋರೋಳೆ, ಸಾಗರ ಮುತ್ತೆ, ನಿತೀನ್ ತೆಲಂಗ್, ವಿಕ್ಕಿ ಬೋರೋಳೆ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.