ADVERTISEMENT

ಬೀದರ್: ರಾಷ್ಟ್ರೀಯ ಗಣಿತ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 15:27 IST
Last Updated 23 ಡಿಸೆಂಬರ್ 2021, 15:27 IST
ಬೀದರ್‌ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಶ್ರೀನಿವಾಸ ರಾಮಾನುಜನ್ ಅಯ್ಯಾಂಗರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರೊ.ಎಲಿಶಾ, ಪ್ರೊ.ಸಚ್ಚಿದಾನಂದಾ ರುಮ್ಮಾ, ಪ್ರೊ.ರಾಜಪ್ಪ ಬಬಚೇಡಿ, ಪ್ರಾಚಾರ್ಯ ಮನೋಜಕುಮಾರ, ಪ್ರೊ. ಭೀಮಶಾ ಕೆ. ಬಿ., ಪ್ರೊ.ಭಾಗ್ಯವತಿ, ಪಾರ್ವತಿ, ಉಮಾಕಾಂತ, ಸಂಜೀಕುಮಾರ ಅಪ್ಪೆ ಇದ್ದಾರೆ

ಬೀದರ್: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಶ್ರೀನಿವಾಸ ರಾಮಾನುಜನ್ ಅಯ್ಯಾಂಗರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಚಾರ್ಯ ಪ್ರೊ.ರಾಜಪ್ಪ ಬಬಚೇಡಿ ಅವರು ಶ್ರೀನಿವಾಸ ರಾಮಾನುಜನ್ ಅಯ್ಯಾಂಗರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಗಣಿತ ವಿಭಾಗದ ಮುಖ್ಯಸ್ಥ ಪ್ರೊ.ಎಲಿಶಾ ಮಾತನಾಡಿದರು. ವಿದ್ಯಾರ್ಥಿನಿಯರಾದ ರೇಣುಕಾ, ಫರಡೋಸ್ ಬೇಗಮ್‍ಬಿ, ಸುಧಾರಾಣಿ, ಅನುಷ್ಕಾ ಪಾಟೀಲ ಅವರು ಶ್ರೀನಿವಾಸ ರಾಮಾನುಜನ್ ಕುರಿತು ಮಾತನಾಡಿದರು.

ಪ್ರಾಚಾರ್ಯ ಪ್ರೊ.ಮನೋಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಉಮಾಕಾಂತ ಗಣಪತಿ, ಸಂಜೀವಕುಮಾರ ಅಪ್ಪೆ, ಭಾಗ್ಯವತಿ, ಪಾರ್ವತಿ ಮೇತ್ರೆ ಇದ್ದರು.

ADVERTISEMENT

ಐಕ್ಯೂಎಸಿ ಘಟಕದ ಸಂಯೋಜಕ ಭೀಮಶಾ ಕೆ.ಬಿ ರವರು ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸಚ್ಚಿದಾನಂದ ರುಮ್ಮಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.