ಬೀದರ್: ಇಲ್ಲಿಯ ಬಿ.ವಿ. ಭೂಮರಡ್ಡಿ ಪದವಿ ಕಾಲೇಜಿನಲ್ಲಿ ಜಿಲ್ಲೆಯ ಎನ್.ಸಿ.ಸಿ. ಭೂ ಸೇನೆ ಘಟಕದ ವತಿಯಿಂದ 74ನೇ ಎನ್.ಸಿ.ಸಿ. ದಿನ ಆಚರಿಸಲಾಯಿತು.
32ನೇ ಕರ್ನಾಟಕ ಬಟಾಲಿಯನ್‍ನ ಕಲಬುರಗಿಯ ಸುಬೇದಾರ್ ಮೇಜರ್ ಫೂಲಚಂದ್, ಪ್ರಾಚಾರ್ಯ ಡಾ. ಪಿ. ವಿಠ್ಠಲರೆಡ್ಡಿ ಅವರು ಎನ್.ಸಿ.ಸಿ. ಕುರಿತು ಮಾತನಾಡಿದರು.
ಪ್ರಮುಖರಾದ ನೀಲಕಂಠ ಕಾಳೆ, ಪರಮೇಶ್ವರ ಪಾಟೀಲ, ಸಚಿನ್, ಗೋವಿಂದ್ ಸಿಂಗ್ ಇದ್ದರು. ಎನ್.ಸಿ.ಸಿ ಹಿರಿಯ ಅಧಿಕಾರಿ ಮಹಮ್ಮದ್ ರಫಿ ತಾಳಿಕೋಟಿ ಸ್ವಾಗತಿಸಿದರು.
ಎನ್.ಸಿ.ಸಿ ದಿನದ ಅಂಗವಾಗಿ ಎನ್.ಸಿ.ಸಿ ವಿದ್ಯಾರ್ಥಿಗಳು ಹಾಗೂ ಸೈನ್ಯಾಧಿಕಾರಿ ಸೇರಿ 16 ಜನ ಬ್ರಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.