ADVERTISEMENT

ಕಿಕ್‌ ಬಾಕ್ಸಿಂಗ್‌ನಲ್ಲಿ ನಿಶಿತ್‌ಗೆ ಬಂಗಾರ, ಪರ್ವೇಜ್‌ಗೆ ಬೆಳ್ಳಿ ಪದಕ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:31 IST
Last Updated 13 ಫೆಬ್ರುವರಿ 2026, 7:31 IST
ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆ ತೋರಿದ ಪರ್ವೇಜ್‌, ನಿಶಿತ್‌, ಕರಾಟೆ ತರಬೇತುದಾರರಾದ ಸುವಿತ್‌ ಎಸ್‌. ಮೋರೆ ಹಾಗೂ ಸೂರ್ಯಕಾಂತ ಮೋರೆ ಅವರನ್ನು ಬೀದರ್‌ನಲ್ಲಿ ಮಂಗಳವಾರ ಸನ್ಮಾನಿಸಲಾಯಿತು
ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ನಲ್ಲಿ ಉತ್ತಮ ಸಾಧನೆ ತೋರಿದ ಪರ್ವೇಜ್‌, ನಿಶಿತ್‌, ಕರಾಟೆ ತರಬೇತುದಾರರಾದ ಸುವಿತ್‌ ಎಸ್‌. ಮೋರೆ ಹಾಗೂ ಸೂರ್ಯಕಾಂತ ಮೋರೆ ಅವರನ್ನು ಬೀದರ್‌ನಲ್ಲಿ ಮಂಗಳವಾರ ಸನ್ಮಾನಿಸಲಾಯಿತು   

ಬೀದರ್‌: ನವದೆಹಲಿಯ ಇಂದಿರಾ ಕ್ರೀಡಾ ಭವನದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಬೀದರ್‌ ಜಿಲ್ಲೆಯ ಮುಹಮ್ಮದ್‌ ಪರ್ವೇಜ್‌ ಖಾನ್‌ ಮುಹಮ್ಮದ್‌ ಅಯಾಜ್‌ ಖಾನ್‌ ಹಾಗೂ ನಿಶಿತ ರಾಜಶೇಖರ್‌ ಸಾವಳಗಿ ಅವರು ಉತ್ತಮ ಸಾಧನೆ ತೋರಿ ಪದಕ ಗಳಿಸಿದ್ದಾರೆ.

ಸ್ಪರ್ಧೆಯಲ್ಲಿ ರಾಜ್ಯದ ಒಟ್ಟು 16 ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಪರ್ವೇಜ್‌ ಹಾಗೂ ನಿಶಿತ್‌ ಅವರು ಉತ್ತಮ ಸಾಧನೆ ತೋರಿ ರಾಜ್ಯ ಹಾಗೂ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಕ್ರೀಡಾ ತರಬೇತುದಾರ ಸುವಿತ್ ಎಸ್. ಮೋರೆ ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ನಿಶಿತ್‌ ಸಾವಳಗಿ ಅವರು ಜ್ಯೂ‌ನಿಯರ್ ಕಿಕ್ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪರ್ವೇಜ್‌ ಖಾನ್ ಅವರು ಸೀನಿಯರ್ ಕಿಕ್ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ಸೇರಿದಂತೆ ಇತರೆ 12 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

ADVERTISEMENT

ಪತ್ರಕರ್ತ ಮುಹಮ್ಮದ್ ಮಸೂದ್, ಕರಾಟೆ ತರಬೇತುದಾರ ಸೂರ್ಯಕಾಂತ ಮೋರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.