ADVERTISEMENT

8ರಿಂದ ಆನ್‍ಲೈನ್ ಪ್ರವೇಶ ಪರೀಕ್ಷೆ

ಬಡ ವಿದ್ಯಾರ್ಥಿಗಳಿಗೆ ‘ಶಾಹೀನ್ ಶಿಷ್ಯವೇತನ ಯೋಜನೆ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:18 IST
Last Updated 4 ಫೆಬ್ರುವರಿ 2021, 15:18 IST

ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ‘ಶಾಹೀನ್ ಶಿಷ್ಯವೇತನ ಯೋಜನೆ’ ಜಾರಿಗೊಳಿಸಿದೆ.

ಶಾಲೆ, ಕಾಲೇಜು ಶುಲ್ಕ ಭರಿಸಲು ಅಶಕ್ತರಾದ ವಿದ್ಯಾರ್ಥಿಗಳಿಗೆ ವಸತಿ ಸಹಿತ ಶಿಕ್ಷಣ ಒದಗಿಸುವ ಯೋಜನೆ ಇದಾಗಿದೆ. ಫೆಬ್ರುವರಿ 8 ರಿಂದ 11 ರ ವರೆಗೆ ಆನ್‍ಲೈನ್ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.

8ನೇ ತರಗತಿಯಿಂದ ಯಾವುದೇ ಪದವಿವರೆಗಿನ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯಲು ಅರ್ಹರು. ಆಯ್ಕೆಯಾದವರು 9ನೇ, 10ನೇ, ಪದವಿಪೂರ್ವ, ಪದವಿ (ವಿಜ್ಞಾನ, ಕಲೆ, ವಾಣಿಜ್ಯ), ಸಿಎ ಇಂಟಿಗ್ರೇಟೆಡ್, ಎಲ್‍ಎಲ್‍ಬಿ, ಪತ್ರಿಕೋದ್ಯಮ ಡಿಪ್ಲೊಮಾ ಮೊದಲಾದ ಕೋರ್ಸ್‍ಗಳಿಗೆ ಪ್ರವೇಶ ಪಡೆಯಬಹುದು. ನೀಟ್, ಜೆಇಇ, ಕ್ಲಾಟ್, ಸಿಇಟಿ, ಕೆವಿಪಿವೈ ಪ್ರವೇಶ ಪರೀಕ್ಷೆಗಳ ತರಬೇತಿಯನ್ನೂ ಪಡೆಯಬಹುದಾಗಿದೆ.

ADVERTISEMENT

ಯಾವುದೇ ತರಗತಿಯಲ್ಲಿ ಶಿಕ್ಷಣ ಮೊಟಕುಗೊಳಿಸಿದ, ಆಲಿಮಾ/ಹಾಫಿಝ್ ಕೋರ್ಸ್ ಪೂರೈಸಿರುವ ವಿದ್ಯಾರ್ಥಿಗಳಿಗೆ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ತೇರ್ಗಡೆಯಾಗಿ ಶಿಕ್ಷಣ ಮುಂದುವರಿಸಲು ವಿಶೇಷ ತರಗತಿಗಳ ಅವಕಾಶ ಕೂಡ ಇದೆ.

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಹೆಸರು ನೋಂದಣಿ ಅಥವಾ ಮಾಹಿತಿಗೆ 18001216235, 8722419340ಗೆ ಸಂಪರ್ಕಿಸಬಹುದು.

www.shaheengroup.org ಗೂ ಭೇಟಿ ನೀಡಬಹುದು ಎಂದು ಶಾಹೀನ್ ಶಿಷ್ಯವೇತನ ಯೋಜನೆಯ ಜಿಲ್ಲಾ ಸಂಯೋಜಕ ಶಾಹ ನೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.