ADVERTISEMENT

ಔರಾದ್‌ ಕಳ್ಳತನ ಪ್ರಕರಣ: ಮಹಾರಾಷ್ಟ್ರದ ಪಾರ್ದಿ ಗ್ಯಾಂಗ್‌ ಬಂಧನ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 13:39 IST
Last Updated 12 ಆಗಸ್ಟ್ 2025, 13:39 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಔರಾದ್‌ (ಬೀದರ್): ‘ಜಿಲ್ಲೆಯ ಔರಾದ್‌ ಹಾಗೂ ಚಿಂತಾಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕ್ರಮವಾಗಿ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯ ಮುಖೇಡ್‌ ತಾಲ್ಲೂಕಿನ ಪಾರ್ದಿ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹8.70 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ತಿಳಿಸಿದರು.

ADVERTISEMENT

₹8.59 ಲಕ್ಷ ಬೆಲೆಬಾಳುವ ಚಿನ್ನಾಭರಣ, ₹8,800 ಮೌಲ್ಯದ ಬೆಳ್ಳಿ ಆಭರಣ, ₹2 ಸಾವಿರ ನಗದು ಸೇರಿದೆ. ಔರಾದ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಇನ್ನೊಂದು ಕಳವು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ₹5.39 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಂದು ಅಶೋಕ ಲೀಲ್ಯಾಂಡ್‌ ಸರಕು ಸಾಗಣೆ ವಾಹನ, ₹1.39 ಲಕ್ಷ ನಗದು ಸೇರಿದೆ. ಮಹಾರಾಷ್ಟ್ರದ ಹಣೆಗಾಂವ್‌ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಹಾಗೂ ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ನೇತೃತ್ವದಲ್ಲಿ ಔರಾದ್‌ (ಬಿ) ಠಾಣೆಯ ಪಿಎಸ್‌ಐಗಳಾದ ವಸೀಮ್‌ ಪಟೇಲ್‌, ರೇಣುಕಾ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಉತ್ತಮ್‌ ಚವಾಣ್‌, ಸಂಜುಕುಮಾರ, ಅರುಣ್‌, ಜ್ಞಾನೇಶ್ವರ, ಹರೀಶ್‌, ಬಾಬುಶೆಟ್ಟಿ, ಅಂಕುಶ್‌, ರಾಜರೆಡ್ಡಿ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.