ADVERTISEMENT

ಬೀದರ್: ತಾಯಿ-ಮಗು ವೃತ್ತದಲ್ಲಿ ಸಲಹಾ ಪೆಟ್ಟಿಗೆ ಇಡಿ; ಸಾಹಿತಿ ಭಾರತಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 17:14 IST
Last Updated 9 ಮಾರ್ಚ್ 2021, 17:14 IST
ಬೀದರ್‌ನ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರು ಭಾರತ ಸ್ಕೌಟ್‌ ಮತ್ತು ಗೈಡ್ಸ್‌ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಾಪ್ತಿ ಅರಳಿ ಅವರನ್ನು ಸನ್ಮಾನಿಸಿದರು. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಕಾಡಲೂರು ಸತ್ಯ ನಾರಾಯಣಾಚಾರ್ಯ, ಡಾ.ಗೌತಮ ಅರಳಿ ಇದ್ದಾರೆ
ಬೀದರ್‌ನ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಅವರು ಭಾರತ ಸ್ಕೌಟ್‌ ಮತ್ತು ಗೈಡ್ಸ್‌ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಾಪ್ತಿ ಅರಳಿ ಅವರನ್ನು ಸನ್ಮಾನಿಸಿದರು. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಕಾಡಲೂರು ಸತ್ಯ ನಾರಾಯಣಾಚಾರ್ಯ, ಡಾ.ಗೌತಮ ಅರಳಿ ಇದ್ದಾರೆ   

ಬೀದರ್: ಮಹಿಳೆಯರಿಗೆ ಸಂಬಂಧಿಸಿದ ಸಲಹೆ ನೀಡಲು ಅನುಕೂಲವಾಗುವಂತೆ ನಗರದ ತಾಯಿ-ಮಗು ವೃತ್ತದಲ್ಲಿ ಸಲಹಾ ಪೆಟ್ಟಿಗೆ ಇಡಬೇಕು ಎಂದು ಹಿರಿಯ ಸಾಹಿತಿ ಭಾರತಿ ವಸ್ತ್ರದ ಸಲಹೆ ನೀಡಿದರು.

ನಗರದ ತಾಯಿ-ಮಗು ವೃತ್ತದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆಯರಿಗಾದ ಅನ್ಯಾಯವನ್ನೂ ಬರೆದು ಪೆಟ್ಟಿಗೆಗೆ ಹಾಕಲು ಅವಕಾಶ ಕಲ್ಪಿಸಬೇಕು. ಹೀಗಾದಲ್ಲಿ ಮಹಿಳೆಯರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ತಮ್ಮ ಮೇಲಿನ ಅನ್ಯಾಯ, ಅತ್ಯಾಚಾರದ ಬಗ್ಗೆ ಹೇಳಿಕೊಳ್ಳಲು ಮಹಿಳೆಯರಿಗೆ ವೇದಿಕೆ ಕಲ್ಪಿಸಿದಂತೆಯೂ ಆಗಲಿದೆ ಎಂದು ಹೇಳಿದರು.

ADVERTISEMENT

ಮಹಿಳಾ ದಿನ ಆಚರಿಸಿದರಷ್ಟೇ ಸಾಲದು. ಪ್ರತಿ ದಿನ, ಪ್ರತಿ ಕ್ಷಣವೂ ಮಹಿಳೆಯರನ್ನು ಗೌರವಿಸಬೇಕು ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಿ.ಜೆ. ಪಾರ್ವತಿ ನುಡಿದರು.

ಪಾಲಕರು ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ಪ್ರಾಮುಖ್ಯ ಹಾಗೂ ಅವಕಾಶಗಳನ್ನು ಕೊಡಬೇಕು. ಆಧುನಿಕ ಯುಗದಲ್ಲಿ ಸಹ ಮಹಿಳೆ ಶೋಷಣೆ, ಅನ್ಯಾಯ, ಅತ್ಯಾಚಾರಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಬುದ್ಧದೇವಿ ಅಶೋಕ ಸಂಗಮಕರ್, ಶೈಲಜಾ ಹುಡಗೆ, ಕಸ್ತೂರಿ ಪಟಪಳ್ಳಿ ಮಾತನಾಡಿದರು.

ಶೋಭಾ ಭಾವಿಕಟ್ಟಿ, ಮಲ್ಲಮ್ಮ ಸಂತಾಜಿ, ಸುನೀತಾ ಸಾಕೋಳೆ, ಅಂಬಿಕಾ ಬಿರಾದಾರ, ಸುನೀತಾ ಬಿಕ್ಲೆ, ವೈಷ್ಣವಿ ಗಂಟೆ, ಜ್ಯೋತಿ ಮೂಲಿಮನಿ, ವೀರಭದ್ರಪ್ಪ ಉಪ್ಪಿನ್, ಎಂ.ಪಿ. ಮುದಾಳೆ, ಸುನೀಲ್ ಭಾವಿಕಟ್ಟಿ, ಚನ್ನಬಸವ ಬಿಕ್ಲೆ, ಬಂಡೆಪ್ಪ ಕೋಟೆ, ಗುಂಡಪ್ಪ ಹುಡಗೆ, ಕಾಶೀನಾಥ ಪಾಟೀಲ, ಅಜಿತ್ ಎನ್, ಅಭಯಕುಮಾರ, ಅವಿನಾಶ ಸೋನೆ, ಗೌತಮ ಮುದಾಳೆ ಇದ್ದರು.
ಓಂಕಾರ ಪಾಟೀಲ ಸ್ವಾಗತಿಸಿದರು. ಅರವಿಂದ ಕುಲಕರ್ಣಿ ವಂದಿಸಿದರು.

ಕವಯತ್ರಿ ಭಾರತಿ ವಸ್ತ್ರದ ಸನ್ಮಾನ
ಬೀದರ್‌:
ದೇಶಪಾಂಡೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಪ್ರಗತಿ ಆರೋಗ್ಯ ಶಿಕ್ಷಣ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕವಯತ್ರಿ ಭಾರತಿ ವಸ್ತ್ರದ ಅವರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಎಂ. ಜಿ ದೇಶಪಾಂಡೆ, ಅರವಿಂದ ಕುಲಕರ್ಣಿ, ಗೌತಮ ಬಕ್ಕಪ್ಪ ಹಾಗೂ ಓಂಕಾರ ಪಾಟೀಲ ಇದ್ದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಬೀದರ್‌
: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ, ಬೀದರ್ ನ್ಯೂ ಮದರ್ ಥೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ತಥಾಗತ ನೌಕರರ ಮಂಡಳಿ ವತಿಯಿಂದ ನ್ಯೂಟ್ರಿಶನ್ ಲೈಫ್ ಕಚೇರಿಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ನಿವೃತ್ತ ಶಿಕ್ಷಣಾಧಿಕಾರಿ ರತ್ನಾಬಾಯಿ ಲಾಖೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ.ಶ್ರೇಯಾ ಮಹೇಂದ್ರಕರ್, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಶೈಕ್ಷಣಿಕ ಸಂಯೋಜಕ ಸಂಜೀವಕುಮಾರ ಸ್ವಾಮಿ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕಿಯರಾದ ವಿಜಯಕಲಾ ಬುಕಾಲೆ, ಉಜ್ವಲಾ ಡಾಕುಳಗಿ ವಿಶೇಷ ಉಪನ್ಯಾಸ ನೀಡಿದರು. ಕಲಾಲ ದೇವಿಪ್ರಸಾದ ನಿರೂಪಿಸಿದರು. ತಾತ್ಯಾರಾವ್ ಕಾಂಬಳೆ ಸ್ವಾಗತಿಸಿದರು. ಸತೀಶ ಮಾಲೋದೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.