ADVERTISEMENT

ಔರಾದ್ | ಶ್ವಾನದ ನೆರವಿನಿಂದ 7.5 ಕೆ.ಜಿ ಗಾಂಜಾ ಪತ್ತೆ ಮಾಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 5:59 IST
Last Updated 22 ಮಾರ್ಚ್ 2025, 5:59 IST
   

ಔರಾದ್ (ಬೀದರ್ ಜಿಲ್ಲೆ): ತಾಲ್ಲೂಕಿನ ಬಾರ್ಡರ್ ತಾಂಡಾ ಶಿವಾರದಲ್ಲಿ ಪೊಲೀಸರು ದೀಪಾ ಎಂಬ ಶ್ವಾನದ ನೆರವಿನಿಂದ ₹7.5 ಲಕ್ಷ ಮೌಲ್ಯದ 7.5 ಕೆ.ಜಿ ಗಾಂಜಾ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಸಂಜೆ ದಾಳಿ ಮಾಡಿ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಆತ ಸರಿಯಾಗಿ ಮಾಹಿತಿ ನೀಡದ ಕಾರಣ ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ಪತ್ತೆ ಪರಿಣತಿ ಹೊಂದಿರುವ ದೀಪಾ ಎಂಬ ಶ್ವಾನ ಕರೆ ತಂದು ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟ ಗಾಂಜಾ ಪತ್ತೆ ಮಾಡಿದ್ದಾರೆ.

ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಪಿಎಸ್ಐ ನಂದಕುಮಾರ ಮುಳೆ, ಎಎಸ್ಐ ಸುನೀಲಕುಮಾರ ಕೋರೆ, ಏಕನಾಥ, ಕೊಟ್ರೆಶ್, ರಾಮರೆಡ್ಡಿ, ಸುಭಾಷ, ಸಿದ್ದಣ್ಣ, ಗೌತಮ ಈ ಕಾರ್ಯಾಚರಣೆ ನಡೆಸಿದರು. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.