ADVERTISEMENT

ಪ್ರಾಪ್ತಿ ಅರಳಿಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿ

ವಸ್ತ್ರ ವಿನ್ಯಾಸದೊಂದಿಗೆ ಜೀವನಚರಿತ್ರೆ ಪರಿಚಯಿಸುವ ಸ್ಪರ್ಧಿಸುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 15:42 IST
Last Updated 1 ಡಿಸೆಂಬರ್ 2020, 15:42 IST
ಮದರ್ ತೆರೆಸಾ ವೇಷದಲ್ಲಿ ಪ್ರಾಪ್ತಿ ಅರಳಿ
ಮದರ್ ತೆರೆಸಾ ವೇಷದಲ್ಲಿ ಪ್ರಾಪ್ತಿ ಅರಳಿ   

ಬೀದರ್: ನವೆಂಬರ್‌ನಲ್ಲಿ ‘ನನ್ನ ಕನಸು - ನನ್ನ ಯೋಜನೆ’ ಕುರಿತ ರಾಷ್ಟ್ರ ಮಟ್ಟದ ವಿಡಿಯೊ ಭಾಷಣ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಪ್ರಾಪ್ತಿ ಅರಳಿ ಈಗ ರಾಷ್ಟ್ರ ಮಟ್ಟದ ಮತ್ತೊಂದು ಪ್ರಶಸ್ತಿ ಪಡೆಯುವುದರೊಂದಿಗೆ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಹೆಚ್ಚಿಸಿಕೊಡಿದ್ದಾಳೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತನ್ನ ರೇಂಜರಿಂಗ್‍ನ ಶತಮಾನೋತ್ಸವದ ಅಂಗವಾಗಿ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ದಿವಾಸ್ – ಅರೌಂಡ್ ದ ವರ್ಲ್ಡ್ ’ ಶೀರ್ಷಿಕೆಯಡಿ ದೇಶದ ಮಹಿಳಾ ಸಾಧಿಕಿಯರ ಕುರಿತು ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಬದುಕು ಮತ್ತು ಸಾಧನೆ ಹಾಗೂ ಅವರು ದೇಶಕ್ಕ ನೀಡಿದ ಸಂದೇಶಗಳು ಪ್ರಸ್ತುತ ಪಡಿಸುವ ಸ್ಪರ್ಧೆ ಏರ್ಪಸಿತ್ತು. ಈ ಸ್ಪರ್ಧೆಯಲ್ಲಿ ಬೀದರ್‌ನ ಜ್ಞಾನ ಸುಧಾ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಾಪ್ತಿ ಅರಳಿ ‘ಮದರ್ ತೆರೆಸಾ’ ಅವರ ವಸ್ತ್ರ ವಿನ್ಯಾಸದೊಂದಿಗೆ ಅವರ ಜೀವನ ಚರಿತ್ರೆ ಪ್ರದರ್ಶಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾಳೆ.

ದೇಶದ ಎಲ್ಲ ರಾಜ್ಯಗಳಿಂದ ನೂರಾರು ವಿಧ್ಯಾರ್ಥಿನಿಯರು ಭಾಗವಹಿಸಿದ ಈ ಸ್ಪರ್ಧೆಯಲ್ಲಿ ಅಂತಿಮ ಕಣದಲ್ಲಿ 20 ಸ್ಪರ್ಧಾಳುಗಳು ಉಳಿದಿದ್ದರು. ನಿರ್ಣಾಯಕ ಹಂತದ ಸ್ಪರ್ಧೆಯಲ್ಲಿ ಪ್ರಾಪ್ತಿ ಅರಳಿ ಎರಡನೇ ಸ್ಥಾನ ಪಡೆದು ವಿಜೇತರಾಗಿದ್ದಾಳೆ.
ಫೈನಲ್ಸ್ ತಲುಪಿದ 20 ವಿದ್ಯಾರ್ಥಿನಿಯರಲ್ಲಿ ಬೀದರ್‌ನ ಇಬ್ಬರು ವಿದ್ಯಾರ್ಥಿನಿಯರು ಸ್ಥಾನ ಪಡೆದಿರುವುದು ವಿಶೇಷವಾಗಿತ್ತು. ಆದರೆ ಅಂತಿಮವಾಗಿ ಕರ್ನಾಟಕದ ಪ್ರಾಪ್ತಿ ಅರಳಿ ವಿಜೇತರಾಗಿದ್ದು ಹೆಮ್ಮೆಯ ವಿಷಯವಾಗಿದೆ.

ADVERTISEMENT

ರೇಂಜರಿಂಗ್‍ನ ಶತಮಾನೋತ್ಸವದ ಅಂಗವಾಗಿ ಈ ರೀತಿಯ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಮಕ್ಕಳಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಮಹಿಳಾ ಸಾಧಕೀಯರ ಕುರಿತು ಅಧ್ಯಯನ ಮಾಡಿವಲ್ಲಿ ಅವರ ಸಾಧನೆ ಮತ್ತು ಸಂದೇಶಗಳಿಂದ ಪ್ರೇರಣೆ ಹೊಂದಲು ಸಹಕಾರಿಯಾಗುತ್ತದೆ.

‘ಪ್ರಾಪ್ತಿ ಅರಳಿಯ ರಾಷ್ಟಮಟ್ಟದ ಈ ಸಾಧನೆ ರಾಜ್ಯ ಮತ್ತು ಜಿಲ್ಲೆಯ ಕೀರ್ತಿ ಹೆಚ್ಚಿಸಿದಂತಾಗಿದೆ ಅವಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಇತರೆ ವಿದ್ಯಾರ್ಥಿಗಳಿಗೆ ಇವಳು ಪ್ರೇರೇಪಣೆಯಾಗಲಿದ್ದಾಳೆ’ ಎಂದು ಎಂದು ಭಾರತ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲೆಯ ಮುಖ್ಯಸ್ಥೆ ಗುರಮ್ಮಾ ಸಿದ್ದಾರೆಡ್ಡಿ ರವರು ತಿಳಿಸಿದ್ದಾರೆ.

‘ಪ್ರಾಪ್ತಿ ಅರಳಿಯ ಸಾಧನೆ ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಗೌರವ ತಂದಿದ್ದು ಅವಳ ಈ ಸಾಧನೆ ಇತರೆ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಪ್ರವೇಶ ಪಡೆದು ಸಾಮಾಜಮುಖಿಗಳಲಿ’ ಎಂದು ರಾಜ್ಯದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಶುಭ ಹಾರೈಸಿದ್ದಾರೆ.

ಪದವಿ ಪೂರ್ವ ಕಾಲೇಜಿನ ಉಪ ನಿರ್ದೆಶಕ ಚಂದ್ರಕಾಂತ ಶಾಬಾದಕರ್, ಜ್ಞಾನ ಸುಧಾ ಕಾಲೇಜಿನ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್, ನಿರ್ದೇಶಕರಾದ ಮುನೇಶ್ವರ ಲಾಖಾ, ಗೈಡ್ಸ್ ಆಯುಕ್ತೆ ಲೀಲಾವತಿ ಚಾಕೋತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.