ADVERTISEMENT

ಬೀದರ್ ತಾಲ್ಲೂಕಿನಾದ್ಯಂತ ಶ್ರದ್ಧೆ, ಭಕ್ತಿಯ ರಾಮ ನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 13:14 IST
Last Updated 6 ಏಪ್ರಿಲ್ 2025, 13:14 IST
<div class="paragraphs"><p>ಶ್ರೀ ರಾಮ ನವಮಿ</p></div>

ಶ್ರೀ ರಾಮ ನವಮಿ

   

ಜನವಾಡ: ಬೀದರ್ ತಾಲ್ಲೂಕಿನಾದ್ಯಂತ ಭಾನುವಾರ ಭಕ್ತಿಯಿಂದ ರಾಮ ನವಮಿ ಆಚರಿಸಲಾಯಿತು. ಬಹುತೇಕ ಹನುಮಾನ ದೇಗುಲಗಳಲ್ಲಿ ರಾಮನ ಮೂರ್ತಿ, ಭಾವಚಿತ್ರಕ್ಕೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.

ಜನವಾಡ, ಚಾಂಬೋಳ್, ಇಸ್ಲಾಂಪುರ, ಹಿಪ್ಪಳಗಾಂವ್, ಮರಕಲ್, ಕಮಠಾಣ, ಮನ್ನಳ್ಳಿ, ಮಾಳೆಗಾಂವ್ ಸೇರಿದಂತೆ ವಿವಿಧೆಡೆ ರಾಮನವಮಿ ಸಂಭ್ರಮ ಮನೆ ಮಾಡಿತ್ತು. ಅನೇಕ ಕಡೆ ರಾಮನ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ದೇಗುಲಗಳಲ್ಲಿ ರಾಮನ ಕುರಿತ ಭಕ್ತಿ ಗೀತೆಗಳು ಮೊಳಗಿದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.