ADVERTISEMENT

ನೀರು ಖಾಲಿ ಮಾಡಲು ಆಗ್ರಹಿಸಿ ಧರಣಿ

ಕಬ್ಬು ಹೊಲದಲ್ಲಿ ನಿಂತ ನೀರು: ಕಟಾವಿಗೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 15:15 IST
Last Updated 25 ಜನವರಿ 2021, 15:15 IST
ಕಾರಂಜಾ ಅಚ್ಚುಕಟ್ಟು ಪ್ರದೇಶದ ಇನ್ನೂ ಸ್ವಾಧೀನ ಪಡೆಸಿಕೊಳ್ಳದ ಹೆಚ್ಚುವರಿ ಜಮೀನಿನಲ್ಲಿ ಬೆಳೆದ ಕಬ್ಬಿನಲ್ಲಿ ನಿಂತಿರುವ ನೀರು ಖಾಲಿ ಮಾಡಿಸಲು ಆಗ್ರಹಿಸಿ ಕಾರಂಜಾ ಮುಳಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಬೀದರ್‍ನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು
ಕಾರಂಜಾ ಅಚ್ಚುಕಟ್ಟು ಪ್ರದೇಶದ ಇನ್ನೂ ಸ್ವಾಧೀನ ಪಡೆಸಿಕೊಳ್ಳದ ಹೆಚ್ಚುವರಿ ಜಮೀನಿನಲ್ಲಿ ಬೆಳೆದ ಕಬ್ಬಿನಲ್ಲಿ ನಿಂತಿರುವ ನೀರು ಖಾಲಿ ಮಾಡಿಸಲು ಆಗ್ರಹಿಸಿ ಕಾರಂಜಾ ಮುಳಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಬೀದರ್‍ನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು   

ಬೀದರ್: ಕಾರಂಜಾ ಅಚ್ಚುಕಟ್ಟು ಪ್ರದೇಶದ ಇನ್ನೂ ಸ್ವಾಧೀನಪಡಿಸಿಕೊಳ್ಳದ ಎರಡು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದ ಕಬ್ಬಿನಲ್ಲಿ ನಿಂತಿರುವ ನೀರು ಖಾಲಿ ಮಾಡಿಸಲು ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಧರಣಿ ಆರಂಭಿಸಿತು.

ಜಲಾಶಯದ ನಿಂತ ನೀರಿನಿಂದಾಗಿ ಅರ್ಧದಷ್ಟು ಕಬ್ಬು ಹಾಳಾಗಿದೆ. ನೀರು ಖಾಲಿ ಮಾಡದಿದ್ದರೆ ಉಳಿದ ಕಬ್ಬು ಕೂಡ ರೈತರ ಕೈಗೆ ಬರದು. ಸಕ್ಕರೆ ಕಾರ್ಖಾನೆಗಳು 15 ದಿನಗಳಲ್ಲಿ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಕೊನೆಗೊಳಿಸುವ ಸಾಧ್ಯತೆ ಇರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೂಚಕನಳ್ಳಿ ಹೇಳಿದರು.

ಕಬ್ಬು ಕಟಾವಿಗೆ ಅನುಕೂಲವಾಗುವಂತೆ ಕೂಡಲೇ ನೀರು ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ರೈತರೇ ಕಾರಂಜಾ ಜಲಾಯಶದ ನೀರು ಖಾಲಿ ಮಾಡುವುದು ಕೂಡ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪ್ರಮುಖರಾದ ನಾಗಶೆಟ್ಟೆಪ್ಪ ಹಚ್ಚಿ, ಬಸವರಾಜ ಮೂಲಗೆ, ಶಂಕರರಾವ್ ಗುಂಡಪ್ಪ, ಮಾಣಿಕ ದೇವಣ್ಣನೋರ, ವೀರಶೆಟ್ಟಿ, ರಮೇಶ ರೆಡ್ಡಿ, ಸಿದ್ರಾಮಪ್ಪ, ಅರ್ಜುನ, ಸೂರ್ಯಕಾಂತ ಲಾಲಪ್ಪ, ಮಲಶೆಟ್ಟೆಪ್ಪ, ಸೋಮನಾಥ, ಕುತ್ಬುದ್ದಿನ್, ಹಣಮಂತರಾವ್, ಸಲೀಮಾ ಬೇಗಂ, ಪ್ರಭುರಾವ್, ವಿಜಯಕುಮಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.