
ಭಾಲ್ಕಿ: ‘ಹಿಂದೂಗಳು ತಮ್ಮ ಶ್ರೇಷ್ಠ ಸಂಸ್ಕೃತಿ, ಆಚರಣೆ, ಏಕತೆಯ ಮೂಲಕ ಜಗತ್ತಿನಲ್ಲಿ ಆದರ್ಶ ಸಮಾಜವಾಗಿ ಬಾಳಬೇಕು’ ಎಂದು ಆರ್‌ಎಸ್‍ಎಸ್‍ನ ಸಹ ಕಾರ್ಯವಾಹ ಮುಕುಂದ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಾತಿ ವ್ಯವಸ್ಥೆ ನಮ್ಮ ದೇಶಕ್ಕೆ ಅಂಟಿದ ದೊಡ್ಡರೋಗ, ಇದನ್ನು ಹೊಗಲಾಡಿಸಿದಾಗ ಮಾತ್ರ ಸ್ವಚ್ಚ, ಸುಂದರ ಭಾರತ ನಿರ್ಮಾಣ ಆಗಲು ಸಾಧ್ಯ. ಸಮಾಜದಲ್ಲಿನ ಎಲ್ಲ ಜನರನ್ನು ಒಟ್ಟುಗೂಡಿಸುವ ಕಾರ್ಯವಾದಾಗ ಮಾತ್ರ ಭಾರತ ಶಕ್ತಿಶಾಲಿ ರಾಷ್ಟ್ರವಾಗಲು ಸಾಧ್ಯ. ಅಧರ್ಮವನ್ನು ಧರ್ಮ ಎಂದು ಪಾಲಿಸುವ ಸ್ಥಿತಿಗೆ ನಾವು ತಲುಪಿರುವುದು ಶೋಚನೀಯ ಸಂಗತಿ’
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ರಾಜೇಶ್ವರ ಶಿವಾಚಾರ್ಯರು, ಶಂಕರರಾನಂದ ಸ್ವಾಮೀಜಿ, ಭಂತೇ ಕಶ್ಯಪ್, ಗೋವಿಂದ ಮಹಾರಾಜ, ಹಾವಗಿಲಿಂಗೇಶ್ವರ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ವಿರಾಟ ಹಿಂದು ಸಮ್ಮೇಳನ ಸಮಿತಿ ಅಧ್ಯಕ್ಷ ರಾಚಪ್ಪ ಪಾಟೀಲ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಪ್ರಮುಖರಾದ ಡಿ.ಕೆ.ಸಿದ್ರಾಮ, ದೇವೇಂದ್ರ ಬಿ.ಆರ್.ಪಾಟೀಲ, ಸುಧೀರ್ ನಾಯಿಕ್, ಶಿವರಾಜ ಗಂದಗೆ, ಸೂರಜ್ ಸಿಂಗ್ ರಜಪೂತ, ಗೋವಿಂದರಾವ್ ಬಿರಾದರ, ಸೋಮನಾಥಪ್ಪ ಅಷ್ಟೂರೆ, ಚನ್ನಬಸವಣ್ಣ ಬಳತೆ, ಪ್ರಭುರಾವ್ ಧೂಪೆ, ಶಿವು ಲೋಖಂಡೆ, ಪ್ರಸನ್ನ ಖಂಡ್ರೆ, ಜಯಕಿಶನ ಬಿಯಾನಿ, ವಿಲಾಸ ಬಕ್ಕಾ, ಅಶೋಕ ವಾಲೆ, ಮಹಾಂತೇಶ, ಸತೀಶ ಮುದಾಳೆ, ಈಶ್ವರ ರುಮ್ಮಾ, ಚಂದ್ರಕಾಂತ ತಳವಾಡೆ, ಜೈಹಿಂದ್ ಕುಂಬಾರ ಸೇರಿದಂತೆ ಇತರರು ಇದ್ದರು. ಮಹೇಶ ಶೀಲವಂತ ದೇಶಭಕ್ತಿ ಗೀತೆ ಹಾಡಿದರು. ಪ್ರಕಾಶ ಮಾಶೆಟ್ಟೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಜಯರಾಜ ಧಾಬಶೆಟ್ಟಿ ವಂದಿಸಿದರು.
ಭವ್ಯ ಶೋಭಾ ಯಾತ್ರೆ: ವಿರಾಟ್ ಹಿಂದೂ ಸಮ್ಮೇಳನದ ನಿಮಿತ್ತ ಭವ್ಯ ಶೋಭಾಯಾತ್ರೆ ನಡೆಯಿತು.
ಮಧ್ಯಾಹ್ನ 2 ಗಂಟೆಗೆ ಭಾಲ್ಕೇಶ್ವರ ಮಂದಿರ ಆವರಣದಿಂದ ಹೊರಟ ಬೃಹತ್ ಶೋಭಾಯಾತ್ರೆ ಚನ್ನಬಸವಾಶ್ರಮ ಪರಿಸರದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯುದ್ದಕ್ಕೂ ಕಲಾವಿದರು ವಿವಿಧ ಸಮುದಾಯದ ನೃತ್ಯ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕೋಲಾಟ, ನೃತ್ಯ, ಮಹಾತ್ಮರ ಛದ್ಮವೇಷ ಪ್ರದರ್ಶಿಸಿ ಗಮನ ಸೆಳೆದರು. ಮಹಾತ್ಮರ, ಶರಣರ ಭಾವಚಿತ್ರಗಳನ್ನು ಹೊತ್ತ ಉದ್ದನೆಯ ಆಟೋಗಳ ಸಾಲು ಸಭಿಕರನ್ನು ಆಕರ್ಷಿಸಿತು. ಮೆರವಣಿಗೆಯ ದಾರಿ ಮಧ್ಯದಲ್ಲಿ ರಾಜಕುಮಾರ ಭೋಸಲೆ ಸೇರಿದಂತೆ ವಿವಿಧ ಅಭಿಮಾನಿಗಳು ತಮ್ಮ ಅಂಗಡಿಗಳ ಮುಂದೆ ತಂಪು ಪಾನೀಯ ಮತ್ತು ಮಜ್ಜಿಗೆ ನೀಡಿ ಶೋಭಾ ಯಾತ್ರೆಯಲ್ಲಿ ಭಾಗವಸಿದ ಸಾರ್ವಜನಿಕರ ದಣಿವು ಆರಿಸಿದರು.
ಸದೃಢ ರಾಷ್ಟ್ರಕಟ್ಟಲು ಸಾಮಾಜಿಕ ವ್ಯವಸ್ಥೆಯಲ್ಲಿ ಮತ್ತು ಜನರ ಮಾನಸಿಕತೆಯಲ್ಲಿ ಬದಲಾವಣೆ ತರುವುದು ಅತ್ಯಗತ್ಯಮುಕುಂದ ಆರ್‌ಎಸ್‍ಎಸ್ ಸಹ ಕಾರ್ಯವಾಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.