ADVERTISEMENT

ಸಂಸ್ಕೃತ ಪಠಣ: ಚಿನ್ಮಯ ಜಿಲ್ಲೆಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 12:41 IST
Last Updated 23 ಡಿಸೆಂಬರ್ 2019, 12:41 IST
ಬೀದರಿನ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಧಾರ್ಮಿಕ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಚಿನ್ಮಯ ಜೋಶಿಗೆ ಪ್ರಮಾಣಪತ್ರ ನೀಡಲಾಯಿತು
ಬೀದರಿನ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಧಾರ್ಮಿಕ ಸಂಸ್ಕೃತ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಚಿನ್ಮಯ ಜೋಶಿಗೆ ಪ್ರಮಾಣಪತ್ರ ನೀಡಲಾಯಿತು   

ಬೀದರ್: ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯ ಸಂಸ್ಕೃತ ಪಠಣ ವಿಭಾಗದಲ್ಲಿ ವಿದ್ಯಾರಣ್ಯ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಚಿನ್ಮಯ ವಿದ್ಯಾನಂದ ಜೋಶಿ ಪ್ರಥಮ ಸ್ಥಾನ ಪಡೆದು ಸತತ ಎರಡನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಹತ್ತು ನಿಮಿಷದಲ್ಲಿ ಹತ್ತಕ್ಕೂ ಹೆಚ್ಚು ಸಂಸ್ಕೃತದ ಮಂತ್ರ ಹಾಗೂ ಶ್ಲೋಕಗಳನ್ನು ಶಾಸ್ತ್ರೋಕ್ತ ಧಾಟಿಯಲ್ಲಿ ಹೇಳುವ ಮೂಲಕ ಮೊದಲ ಸ್ಥಾನ ಪಡೆದಿದ್ದಾನೆ. ಜನವರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ಮಯ ಬೀದರ್ ಜಿಲ್ಲೆಯನ್ನು ಪ್ರತಿನಿಧಿಸುವನು.

ಬೀದರ್ ತಾಲ್ಲೂಕಿನ ಜನವಾಡದ ಚಿನ್ಮಯ, ತನ್ನ ಅಜ್ಜ ದಾಮೋಧರರಾವ್ ಜೋಶಿ ಹಾಗೂ ತಂದೆ ವಿದ್ಯಾನಂದ ಜೋಶಿ ಅವರಿಂದ ವಿವಿಧ ಸಂಸ್ಕೃತ ಮಂತ್ರಪಠಣಗಳನ್ನು ಕಲಿತಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.