ADVERTISEMENT

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹5 ಲಕ್ಷ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:54 IST
Last Updated 19 ಜನವರಿ 2026, 5:54 IST
<div class="paragraphs"><p>ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು</p></div>

ಸೌದಿ ಅರೇಬಿಯಾದ ಬಸ್ ಅಪಘಾತದಲ್ಲಿ ಮೃತಮಟ್ಟವರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು

   

ಬೀದರ್: ಸೌದಿ ಅರೇಬಿಯಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ರಹಮತ್ ಬೀ ಅವರ ಕುಟುಂಬಕ್ಕೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ₹ 5 ಲಕ್ಷ ಪರಿಹಾರದ ಚೆಕ್‌ ಅನ್ನು ಹಸ್ತಾಂತರಿಸಿದರು.‌

ಹೋದ ವರ್ಷ ನ.17ರಂದು ರಂದು ಮೆಕ್ಕಾ ಮತ್ತು ಮದೀನಾ ನಡುವಿನ ಹೆದ್ದಾರಿಯಲ್ಲಿ ಡೀಸೆಲ್ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೀದರ್‌ನ ಮೈಲೂರಿನ ನಿವಾಸಿ ರಹಮತ್ ಬೀ ಸಾವನ್ನಪ್ಪಿದ್ದರು.

ADVERTISEMENT

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ (ಕೆಎಸ್‌ಎಚ್‌ಸಿ) ಅಧ್ಯಕ್ಷ ಎಸ್. ಜುಲ್ಫಿಕರ್ ಅಹಮದ್ ಖಾನ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.