ADVERTISEMENT

ಕಾಯಕ ತತ್ವಕ್ಕೆ ಸವಿತಾ ಸಮಾಜ ಮಾದರಿ: ಶಿವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:41 IST
Last Updated 21 ಆಗಸ್ಟ್ 2025, 5:41 IST
ಹುಲಸೂರ ಪಟ್ಟಣದ ಭವಾನಿ ಮಂದಿರದಲ್ಲಿ ಶ್ರೀ ಸಂತ ಸೇನಾ ಮಹಾರಾಜ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿದ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ ಸಿಂಗ ಸೇರಿ ಪ್ರಮುಖರು ಉಪಸ್ಥಿತರಿದ್ದರು
ಹುಲಸೂರ ಪಟ್ಟಣದ ಭವಾನಿ ಮಂದಿರದಲ್ಲಿ ಶ್ರೀ ಸಂತ ಸೇನಾ ಮಹಾರಾಜ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿದ ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯ ಸಿಂಗ ಸೇರಿ ಪ್ರಮುಖರು ಉಪಸ್ಥಿತರಿದ್ದರು   

ಹುಲಸೂರ: ‘ಸವಿತಾ ಸಮಾಜ ನೈಜ ಕಾಯಕ ವರ್ಗವಾಗಿದ್ದು, ಕಾಯಕದಲ್ಲಿ ಕೈಲಾಸ ಕಾಣುವ ಶ್ರಮಿಕರಾಗಿದ್ದಾರೆ’ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಇಸಂಪಲ್ಲಿ ಭವಾನಿ ದೇವಸ್ಥಾನದಲ್ಲಿ ಬುಧವಾರ ಹಡಪದ ಸಮಾಜದವರಿಂದ ಸಂತಸೇನಾ ಮಹಾರಾಜ 835ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವಿಶ್ವಗುರು ಬಸವಣ್ಣನವರ ಕಾಯಕತ ತತ್ವ ನಿಜವಾಗಿ ಪಾಲಿಸುತ್ತಿರುವ ಸಮುದಾಯ ಸವಿತಾ ಸಮಾಜ. ಜಗತ್ತಿಗೆ ಅತ್ಯಂತ ದೊಡ್ಡ ಕೊಡುಗೆ ಈ ಸಮಾಜ ನೀಡಿದೆ’ ಎಂದರು.

ADVERTISEMENT

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ ಮಾತನಾಡಿ, ರಾಜ್ಯದಲ್ಲಿ ಇತ್ತಿಚೇಗೆ ಸಂತ ಸೇನಾ ಮಹಾರಾಜರ ಜಯಂತಿ ಹಾಗೂ ಪುಣ್ಯಸ್ಮರಣೆ ಅದ್ದೂರಿಯಾಗಿ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

‘ಸಮುದಾಯದ ಬೇಡಿಕೆ ಈಡೇರಿಕೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಜಿ.ಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಲತಾ ಹಾರಕುಡೆ, ಸುಧೀರ ಕಾಡಾದಿ, ಆಕಾಶ ಖಂಡಾಳೆ, ದೇವಿಂದ್ರ ಪವಾರ, ತುಕಾರಾಮ ಡವಾರೆ ಮಾತನಾಡಿದರು. ಸಂತ ಸೇನಾ ಮಹಾರಾಜ ಕುರಿತು ಬಿ. ಆರ್. ಕವಟೆ ವಿಶೇಷ ಉಪನ್ಯಾಸ ನೀಡಿದರು.

ಗ್ರಾ.ಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ, ಉಪಾಧ್ಯಕ್ಷೆ ಮೀರಾಬಾಯಿ ರಣಜೀತ ಗಾಯಕವಾಡ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಪ್ರವೀಣ ಸೂರ್ಯವಂಶಿ, ಪಿಕೆಪಿಎಸ್ ಅಧ್ಯಕ್ಷ ಎಂ. ಜಿ. ರಾಜೊಳೆ, ನೀಲಕಂಠ ರಾಠೋಡ, ನವರಂಗ ಅಜರ ಅಲಿ ಸಾಬ್, ಸಿದ್ರಾಮ ಕಾಮಣ್ಣ, ಸಂತೋಷ ಗುತ್ತೆದಾರ, ಪ್ರವೀಣ ಕಾಡಾದಿ, ಪಪ್ಪು ಉದಾನೆ, ಮನ್ಸೂರ್ ದಾವಲಜಿ, ಗೌಸೋದೀನ, ಇಜಾಜ್ ಜಹಾಂಗೀರ್ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ರಾಜಕುಮಾರ ತೊಂಡಾರೆ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.