ADVERTISEMENT

ಬೀದರ್: ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ ಸಾವಿತ್ರಿಬಾಯಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 12:34 IST
Last Updated 5 ಜನವರಿ 2022, 12:34 IST
ಬೀದರ್‌ನ ಕರುನಾಡು ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುನೀತಾ ಗಾಯಕವಾಡ್ ಉದ್ಘಾಟಿಸಿದರು. ದೇವಿಪ್ರಸಾದ್ ಕಲಾಲ್, ಸಂಜೀವಕುಮಾರ ಅತಿವಾಳೆ, ಚಂದ್ರಪ್ಪ ಹೆಬ್ಬಾಳಕರ್, ಎಂ.ಎಸ್. ಮನೋಹರ, ಸುನಿತಾ, ಸಾವಿತ್ರಿ ಕುಂದನ್, ಸ್ನೇಹಲತಾ, ಉಜ್ವಲಾ ಚಂದನ್, ಸತ್ಯವತಿ ಇದ್ದರು
ಬೀದರ್‌ನ ಕರುನಾಡು ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮವನ್ನು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುನೀತಾ ಗಾಯಕವಾಡ್ ಉದ್ಘಾಟಿಸಿದರು. ದೇವಿಪ್ರಸಾದ್ ಕಲಾಲ್, ಸಂಜೀವಕುಮಾರ ಅತಿವಾಳೆ, ಚಂದ್ರಪ್ಪ ಹೆಬ್ಬಾಳಕರ್, ಎಂ.ಎಸ್. ಮನೋಹರ, ಸುನಿತಾ, ಸಾವಿತ್ರಿ ಕುಂದನ್, ಸ್ನೇಹಲತಾ, ಉಜ್ವಲಾ ಚಂದನ್, ಸತ್ಯವತಿ ಇದ್ದರು   

ಬೀದರ್: ಸಾವಿತ್ರಿಬಾಯಿ ಫುಲೆ ಮೇಲ್ವರ್ಗದವರ ದೌರ್ಜನ್ಯವನ್ನು ಮೆಟ್ಟಿ ನಿಂತು ಶಿಕ್ಷಣದ ಮೂಲಕ ದಲಿತರು ಹಾಗೂ ಶೂದ್ರರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದರು ಎಂದು ಮಾತೋಶ್ರೀ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ಪುನೀತಾ ಗಾಯಕವಾಡ್ ನುಡಿದರು.

ಇಲ್ಲಿಯ ಕರುನಾಡು ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಧರಿನಾಡು ಕನ್ನಡ ಸಂಘ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಬುದ್ಧ ಬೆಳಕು ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತುಳಿತಕ್ಕೆ ಒಳಗಾದವರು ಹಾಗೂ ಮಹಿಳೆಯರ ಏಳಿಗೆಗೆ ಶ್ರಮಿಸಿದ್ದ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಪರಿಚಯ ಎಲ್ಲರಿಗೂ ಮಾಡಿಕೊಡುವ ಅಗತ್ಯ ಇದೆ ಎಂದು ಶಿಕ್ಷಕರ ಸಾಹಿತ್ಯ, ಸಾಂಸ್ಕøತಿಕ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ಅತಿವಾಳೆ ಹೇಳಿದರು.

ADVERTISEMENT

ಶಿಕ್ಷಕಿ ಶೋಭಾವತಿ ಜಂಜೀರೆ ಮಾತನಾಡಿದರು. ಉಜ್ವಲಾ ಡಾಕುಳಗಿ ದಂಪತಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಚ್. ನರಸಿಂಹಯ್ಯ ಪ್ರಶಸ್ತಿ ಪುರಸ್ಕೃತ ಎಂ.ಎಸ್. ಮನೋಹರ ದಂಪತಿ ಹಾಗೂ ಜಗನ್ನಾಥ ಮತ್ತಂಗಿ ಅವರನ್ನು ಸನ್ಮಾನಿಸಲಾಯಿತು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸುಜಾತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್, ಸಮಾಜ ಸೇವಕಿ ಸುನಿತಾ ಎಂ.ಎಸ್. ಮನೋಹರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಕಲಾಲ್, ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ವಿಜಯಕುಮಾರ ಸೋನಾರೆ, ಬಕ್ಕಪ್ಪ ಮಾಡಗೋಳ, ಹಂಸಕವಿ, ಸಾವಿತ್ರಿ ಕುಂದನ್, ಉಜ್ವಲಾ ಚಂದನ್, ವನಮಾಲಾ ಶಿಂದೆ, ಸ್ನೇಹಲತಾ, ಸತ್ಯವತಿ, ಯೇಸುದಾಸ ಅಲಿಯಂಬುರೆ ಇದ್ದರು.

ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ನಿರೂಪಿಸಿದರು. ಶಿವರಾಜ ಪೂಜಾರಿ ಸ್ವಾಗತಿಸಿದರು. ಅಶೋಕ ಶಿಂದೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.