ಔರಾದ್: ತಾಲ್ಲೂಕಿನ ಸಂತಪುರ ಹೋಲಿ ಕ್ರಾಸ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆ ಆಯೋಗದ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.
ಪ್ರಥ್ವಿರಾಜ್ (ಶಾಲಾ ನಾಯಕ), ವಿದ್ಯಾ (ಉಪ ನಾಯಕಿ), ವೆರೋನಿಕಾ (ಶಾಲಾ ಸಾಂಸ್ಕೃತಿಕ ಮಂತ್ರಿ) ದಾವಿದ್ (ಶಾಲಾ ಶಿಕ್ಷಣ ಮಂತ್ರಿ), ಇಸಾಕ್ (ಕ್ರೀಡಾ ಮಂತ್ರಿ), ರೋಷನ್ (ಶಾಲಾ ಶಿಸ್ತು ಮಂತ್ರಿ), ಸುಧೀರ್ (ಶಾಲಾ ಪರಿಸರ ಮಂತ್ರಿ) ಶಾಲಾ ಸಂಸತ್ತಿಗೆ ಆಯ್ಕೆಯಾದವರು.
‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆ ಪೂರಕ. ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ’ ಎಂದು ಮುಖ್ಯ ಶಿಕ್ಷಕಿ ಸಿಸ್ಟರ್ ಯಡ್ರಿಯನ್ ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಮಾತನಾಡಿ,‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಳ ಪ್ರಮುಖ ಘಟ್ಟ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೂ ಭಾರತೀಯ ಚುನಾವಣೆ ವ್ಯವಸ್ಥೆ ಹಾಗೂ ತಮ್ಮ ಜವಾಬ್ದಾರಿ ತಿಳಿಸಿ ಕೊಡಲು ಈ ಶಾಲಾ ಸಂಸತ್ ರಚನೆ ಉತ್ತಮ ವಿಧಾನವಾಗಿದೆ’ ಎಂದರು.
ಫಾದರ್ ಕ್ಲೀವನ್, ಶಿಕ್ಷಕ ಸತೀಶ್ ನಾಗೂರೆ, ಸೀಮಾ, ಸುನಿತಾ, ಅಂಜಲಿ, ಪೂಜಾ, ಅಂಬಿಕಾ, ಜೀವಿತಾ, ತಬೀತಾ, ಸುವರ್ಣಾ, ಅಲ್ವಿರಿನ್, ಮಂದಾಕಿನಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.