ADVERTISEMENT

ಹೊನ್ನಿಕೇರಿ: ದೇಗುಲಕ್ಕೆ ಚಿತ್ತಾಕರ್ಷಕ ಮಹಾದ್ವಾರ

ಕೊನೆಗೂ ಈಡೇರಿದ ಸಿದ್ಧೇಶ್ವರ ಭಕ್ತರ ಬಹು ದಿನಗಳ ಆಸೆ

ನಾಗೇಶ ಪ್ರಭಾ
Published 20 ಜುಲೈ 2025, 6:13 IST
Last Updated 20 ಜುಲೈ 2025, 6:13 IST
ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿ ಹೊನ್ನಿಕೇರಿ ಕ್ರಾಸ್ ಬಳಿ ಸಿದ್ಧೇಶ್ವರ ದೇಗುಲಕ್ಕೆ ನಿರ್ಮಿಸಿರುವ ಸುಂದರ ಮಹಾದ್ವಾರ
ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿ ಹೊನ್ನಿಕೇರಿ ಕ್ರಾಸ್ ಬಳಿ ಸಿದ್ಧೇಶ್ವರ ದೇಗುಲಕ್ಕೆ ನಿರ್ಮಿಸಿರುವ ಸುಂದರ ಮಹಾದ್ವಾರ   

ಹೊನ್ನಿಕೇರಿ (ಜನವಾಡ): ಬೀದರ್- ಭಾಲ್ಕಿ ಮುಖ್ಯರಸ್ತೆಯಲ್ಲಿನ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ಸಿದ್ಧೇಶ್ವರ ದೇಗುಲಕ್ಕೆ ಚಿತ್ತಾಕರ್ಷಕ ಮಹಾದ್ವಾರ ಸಿದ್ಧವಾಗಿದೆ.

ಸಂಪೂರ್ಣ ಭಕ್ತರ ದೇಣಿಗೆಯಿಂದಲೇ ಮಹಾದ್ವಾರ ನಿರ್ಮಿಸಿದ್ದು, ಬೀದರ್-ಭಾಲ್ಕಿ ಮುಖ್ಯರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.

ಮಹಾದ್ವಾರ 30 ಅಡಿ ಅಗಲ ಹಾಗೂ 30 ಅಡಿ ಎತ್ತರ ಇದೆ. ಕಂಬಗಳ ಮೇಲೆ ತಲಾ 5 ಅಡಿಯ 5 ಗೋಪುರಗಳಿವೆ ಎಂದು ಹೇಳುತ್ತಾರೆ ಮಹಾದ್ವಾರ ನಿರ್ಮಾಣದ ಪ್ರಮುಖರಲ್ಲೊಬ್ಬರಾದ ಮಳಚಾಪುರದ ಮುಖಂಡ ಸಂಗಮೇಶ ಪಾಟೀಲ.

ADVERTISEMENT

ಮಹಾದ್ವಾರದ ಕಂಬಗಳ ಮೇಲೆ ಢಮರುವಿನೊಂದಿಗೆ ತ್ರಿಶೂಲ, ದ್ವಾರಪಾಲಕರ ಉಬ್ಬು ಚಿತ್ರ ಬಿಡಿಸಲಾಗಿದೆ. ಹಿಂದಿಯಲ್ಲಿ ‘ಓಂ' ಬರೆಯಲಾಗಿದೆ ಎಂದು ತಿಳಿಸುತ್ತಾರೆ.

ಮಹಾದ್ವಾರದ ಮೇಲುಗಡೆ ಶಿವಲಿಂಗ, ನಂದಿ, ಹುಲಿಯ ಮೂರ್ತಿಗಳಿವೆ ಎಂದು ಹೇಳುತ್ತಾರೆ.

ಜಿಲ್ಲೆಯ ಭಕ್ತರ ದೇಣಿಗೆ ಹಾಗೂ ಹೊನ್ನಿಕೇರಿ ಗ್ರಾಮಸ್ಥರ ಸಹಕಾರದಿಂದ ಮಹಾದ್ವಾರ, ಅದರ ಬಳಿ ಬಸ್ ತಂಗುದಾಣ, ಕಿರು ನೀರು ಟ್ಯಾಂಕ್ ನಿರ್ಮಿಸಲಾಗಿದೆ ಎಂದು ಪ್ರಮುಖರಾದ ಪ್ರೇಮಸಾಗರ್ ಪಾಟೀಲ ಮಳಚಾಪುರ, ಮಲ್ಲಿಕಾರ್ಜುನ ತಾಂಬಳ್ಳೆ ರುದನೂರು ಹಾಗೂ ಮಲ್ಲಿಕಾರ್ಜುನ ಕೋಟೆ ಕಪಲಾಪುರ ತಿಳಿಸುತ್ತಾರೆ.

ಸಂಗಮೇಶ ಪಾಟೀಲ
ಮಹಾದ್ವಾರಕ್ಕೆ ₹ 20 ಲಕ್ಷ ವೆಚ್ಚವಾಗಿದೆ. ಜುಲೈ 20 ಮತ್ತು 21 ರಂದು ಉದ್ಘಾಟನಾ ಕಾರ್ಯಕ್ರಮ ಜರುಗಲಿದೆ.
ಸಂಗಮೇಶ ಪಾಟೀಲ ಮಳಚಾಪುರದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.