ADVERTISEMENT

ಜೋಜನಾ ಗ್ರಾ.ಪಂಗೆ ಸ್ಕೋಚ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 10:35 IST
Last Updated 13 ಜನವರಿ 2020, 10:35 IST
ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಔರಾದ್ ತಾಲ್ಲೂಕಿನ ಜೋಜನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಘಾಳರೆಡ್ಡಿ ಪ್ರತಿಷ್ಠಿತ ಸ್ಕೋಚ್ ಪ್ರಶಸ್ತಿ ಸ್ವೀಕರಿಸಿದರು
ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಔರಾದ್ ತಾಲ್ಲೂಕಿನ ಜೋಜನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಘಾಳರೆಡ್ಡಿ ಪ್ರತಿಷ್ಠಿತ ಸ್ಕೋಚ್ ಪ್ರಶಸ್ತಿ ಸ್ವೀಕರಿಸಿದರು   

ಔರಾದ್ (ಬೀದರ್): ನೀರು ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ತಾಲ್ಲೂಕಿನ ಜೋಜನಾ ಗ್ರಾಮ ಪಂಚಾಯಿತಿಯು ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಕೋಚ್ ಪ್ರಶಸ್ತಿಗೆ ಪಾತ್ರವಾಗಿದೆ.

ನವದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸ್ಕೋಚ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಮೀರ್ ಕೊಚ್ಚಾರ್ ಅವರು ಜೋಜನಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಘಾಳೆರೆಡ್ಡಿ ಮತ್ತು ಅಭಿವೃದ್ಧಿ ಅಧಿಕಾರಿ ಸಂತೋಷ ಪಾಟೀಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಗೆ ರಾಜ್ಯದಿಂದ ಜೋಜನಾ ಗ್ರಾಮ ಪಂಚಾಯಿತಿಯೊಂದೇ ಆಯ್ಕೆ ಆಗಿರುವುದು ವಿಶೇಷ.ಪ್ರಶಸ್ತಿ ಆಯ್ಕೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಮತದಾನದಲ್ಲಿ ಜೋಜನಾ ಪಂಚಾಯಿತಿಗೆ ಹೆಚ್ಚಿನ ಮತ ಬಂದವು.

ADVERTISEMENT

ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪಂಚಾಯಿತಿಯು 100ಕ್ಕೂ ಹೆಚ್ಚು ತೆರೆದ ಬಾವಿ ಕೊರೆದಿದೆ. ಅಂತರ್ಜಲಮಟ್ಟ ವೃದ್ಧಿಸಿದೆ. ಸ್ವಚ್ಛ ಭಾರತ ಯೋಜನೆ ಅನುಷ್ಠಾನಗೊಳಿಸುವಲ್ಲಿ ಮಾದರಿಯಾಗಿದೆ. ಬೋಗನಾ ಸೇರಿದಂತೆ ವಿವಿಧ ಗ್ರಾಮದಲ್ಲಿ ಶೌಚಾಲಯ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸಿದೆ. ‘ಬೇರೆ ಬೇರೆ ಕಡೆ ಈ ಊರಿನ ಮಾದರಿ ಅನುಸರಿಸಲಾಗಿದೆ. ಎಲ್ಲವನ್ನೂ ಪರಿಗಣಿಸಿ ನಮ್ಮ ಪಂಚಾ ಯಿತಿಗೆ ಪ್ರಶಸ್ತಿ ಬಂದಿರುವುದು ಆತ್ಮಬಲ ಹೆಚ್ಚಿಸಿದೆ. ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಕ್ಕಿದೆ’ ಎಂದು ಪಿಡಿಒ ಸಂತೋಷ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.