ADVERTISEMENT

ಎಸ್.ಎಂ.ಹಿರೇಮಠಗೆ ‘ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 20:32 IST
Last Updated 2 ಅಕ್ಟೋಬರ್ 2025, 20:32 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಬುಧವಾರ ಚನ್ನವೀರ ಶಿವಾಚಾರ್ಯರು ಸಾಹಿತಿ ಎಸ್.ಎಂ.ಹಿರೇಮಠ ಅವರಿಗೆ ‘ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಶರಣು ಸಲಗರ ಇದ್ದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡದಲ್ಲಿ ಬುಧವಾರ ಚನ್ನವೀರ ಶಿವಾಚಾರ್ಯರು ಸಾಹಿತಿ ಎಸ್.ಎಂ.ಹಿರೇಮಠ ಅವರಿಗೆ ‘ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ಶರಣು ಸಲಗರ ಇದ್ದರು   

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡದಲ್ಲಿ ಬುಧವಾರ ಚನ್ನವೀರ ಶಿವಾಚಾರ್ಯರು ಕಲಬುರಗಿಯ ಸಾಹಿತಿ ಎಸ್.ಎಂ.ಹಿರೇಮಠ ಅವರಿಗೆ ಪ್ರಸಕ್ತ ಸಾಲಿನ ‘ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಎರಡು ತೊಲ ಚಿನ್ನದ ಪದಕ ಒಳಗೊಂಡಿದೆ. ಗುರುಲಿಂಗ ಶಿವಾಚಾರ್ಯರ 56ನೇ ಪುಣ್ಯಸ್ಮರಣೆ ಹಾಗೂ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಶಾಸಕ ಶರಣು ಸಲಗರ, ಅಭಿಷೇಕರೆಡ್ಡಿ ದೇಶಮುಖ, ಸಂಗಮೇಶ ಸವದತ್ತಿಮಠ, ಗವಿಸಿದ್ದಪ್ಪ ಪಾಟೀಲ ಮಾತನಾಡಿದರು.

ಚನ್ನವೀರ ಶಿವಾಚಾರ್ಯರು ಬರೆದ ‘ಚನ್ನದೀಪ್ತಿ’ ಹಾಗೂ ಸಂಗಮೇಶ ಸವದತ್ತಿಮಠ ರಚಿಸಿದ ‘ನೈವೇದ್ಯ’ ಗ್ರಂಥಗಳನ್ನು ಸಹ ಬಿಡುಗಡೆ ಮಾಡಲಾಯಿತು. ಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಹೊನ್ನಾನಾಯಕ್, ಜಗನ್ನಾಥ ಪಾಟೀಲ, ಶಿವರಾಜ ನರಶೆಟ್ಟಿ, ವೀರಣ್ಣ ಮೂಲಗೆ, ಬಸವರಾಜ ಕುಂಬಾರ, ಸಂಜೀವಕುಮಾರ ದೇಗಾಂವ, ವೀರಣ್ಣ ದುರ್ಗೆ ಉಪಸ್ಥಿತರಿದ್ದರು. ಸಿದ್ರಾಮಯ್ಯ ಗೋರಟಾ, ಜನಾರ್ದನ ವಾಘಮಾರೆ ಸಂಗೀತ ಪ್ರಸ್ತುತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.