ಔರಾದ್: ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಾಲ್ಲೂಕಿನ ಗಣೇಶಪುರ ಗ್ರಾಮಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ವಿದ್ಯಾರ್ಥಿಗಳು ವೈವಿಧ್ಯಮಯ ಕಲೆ ಪ್ರದರ್ಶಿಸಿ ಗಮನ ಸೆಳೆದರು.
ಶಿಬಿರದ ಕೊನೆ ದಿನವಾದ ಶುಕ್ರವಾರ ಗ್ರಾಮದಲ್ಲಿ ಧೂಮಪಾನ, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನ ಮಾಡಿದರು. ಮಹಾತ್ಮ ಗಾಂಧಿ ಕಂಡ ಗ್ರಾಮ ಅಭಿವೃದ್ಧಿ, ಸಮೃದ್ಧ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಜಾಗೃತಿ ಮೂಡಿಸಿದರು. ನಂತರ ಊರಿನಲ್ಲಿ ಜಾಥಾ ನಡೆಸಿದರು.
ಪ್ರಾಂಶುಪಾಲರಾದ ಅಂಬಿಕಾದೇವಿ ಕೋತಮಿರ ಮಾತನಾಡಿ, ‘ಏಳು ದಿನಗಳ ಶಿಬಿರದಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾದಿಂದ ಪಾಲ್ಗೊಂಡರು’ ಎಂದು ಹೇಳಿದರು.
ಸೇವಾ ಯೋಜನಾಧಿಕಾರಿ ವಿನಾಯಕ ಕೋತಮಿರ, ಉಪನ್ಯಾಸಕ ದಯಾನಂದ ಬಾವುಗೆ, ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಉಪನ್ಯಾಸ ಸಂಜೀವಕುಮಾರ ತಾಂದಳೆ, ಅಂಬಿಕಾ, ಮಹೇಶ, ಪದ್ಮಾಂಜಲಿ, ವಿಠಲರಾವ ಕಾಂಬಳೆ, ರಾಜಕುಮಾರ, ಸುಬ್ಬಣ್ಣ, ಆನಂದ ಡೊಂಬಾಳೆ, ಮಹೇಶಕುಮಾರ, ಮಿಲಿಂದ, ಆನಂದ ಗಾಯಕವಾಡ, ದೇವೇಂದ್ರಪ್ಪ ತಡಕಲೆ, ಜಾವೇದ್, ಸುನೀಲ ಮಾಳಗೆ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.