ADVERTISEMENT

ಹೆಚ್ಚುವರಿ ಬಸ್ ಸೇವೆ; ವಿದ್ಯಾರ್ಥಿಗಳ ಆಗ್ರಹ- ದಾಡಗಿ ಗ್ರಾಮದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:38 IST
Last Updated 1 ಡಿಸೆಂಬರ್ 2021, 4:38 IST
ಖಟಕಚಿಂಚೋಳಿ ಸಮೀಪದ ದಾಡಗಿ ಗ್ರಾಮದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಕಲ್ಪಿಸುವಂತೆ ಪ್ರತಿಭಟಿಸಿ ಭಾಲ್ಕಿಯ ಕೆಎಸ್ಆರ್‌ಟಿಸಿ ವ್ಯವಸ್ಥಾಪಕರ ಅಧೀನ ಅಧಿಕಾರಿಗೆ ಮನವಿ ಸಲ್ಲಿಸಿದರು
ಖಟಕಚಿಂಚೋಳಿ ಸಮೀಪದ ದಾಡಗಿ ಗ್ರಾಮದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಹೆಚ್ಚುವರಿ ಬಸ್ ಕಲ್ಪಿಸುವಂತೆ ಪ್ರತಿಭಟಿಸಿ ಭಾಲ್ಕಿಯ ಕೆಎಸ್ಆರ್‌ಟಿಸಿ ವ್ಯವಸ್ಥಾಪಕರ ಅಧೀನ ಅಧಿಕಾರಿಗೆ ಮನವಿ ಸಲ್ಲಿಸಿದರು   

ಖಟಕಚಿಂಚೋಳಿ: ಸಮೀಪದ ದಾಡಗಿ ಗ್ರಾಮಕ್ಕೆ ಹೆಚ್ಚುವರಿ ಬಸ್‌ಗಳ ಓಡಾಟ ಹಾಗೂ ನಿರ್ದಿಷ್ಟ ಸಮಯ ನಿಗದಿಪಡಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆನಡೆಸಿದರು.

ಶಾಲಾ ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳುಬೆಳಿಗ್ಗೆ 7 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದರೂ ಬಸ್‌ಗಳು ಬಂದಿರುವುದಿಲ್ಲ. ಇದರಿಂದ ಕಾಲೇಜಿಗೆ ತಡವಾಗುತ್ತಿದ್ದು, ತರಗತಿತಯ ಪಾಠ ಕೇಳಲು ಆಗುತ್ತಿಲ್ಲ. ಬಹುತೇಕ ಸಯವನ್ನು ನಿಲ್ದಾಣದಲ್ಲಿ ಕಳೆಯುವಂತೆ ಆಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ವಿಳಂಬಕ್ಕೆ ಬೇಸತ್ತ ವಿದ್ಯಾರ್ಥಿಗಳು ಮೂರು ಗಂಟೆ ಪ್ರತಿಭಟನೆ ನಡೆಸಿ, ಭಾಲ್ಕಿಯ ಕೆಎಸ್ಆರ್‌ಟಿಸಿ ವ್ಯವಸ್ಥಾಪಕರ ಅಧೀನ ಅಧಿಕಾರಿಯ ಮೌಖಿಕ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದರು.

ADVERTISEMENT

ನಿಮುಂಗಡ ಹಣ ಪಾವತಿಸಿ ಪಾಸ್ ಕೂಡ ಪಡೆದುಕೊಂಡಿದ್ದೇವೆ. ಆದರೂ ಸಕಾಲಕ್ಕೆ ಬಸ್‌ಗಳು ಬರುತ್ತಿಲ್ಲ. ಬಸ್ ಪಾಸ್ ಇದ್ದು ಇಲ್ಲದಂತಾಗಿದೆಎಂದರು.

ಸಂಬಂಧ ಪಟ್ಟ ಅಧಿಕಾರಿಗಳು ಪ್ರತಿ ಹಳ್ಳಿಗಳಿಗೂ ಬಸ್ ಓಡಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಜತೆಗೆ ಕೆಎಸ್ಆರ್‌ಟಿಸಿ ವ್ಯವಸ್ಥಾಪಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ಧ ಜಾಡರ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ಹಳ್ಳಿಗೂ ಬಸ್‌ ಸೇವೆ ಕಲ್ಪಿಸುವಂತೆ ಭಾಲ್ಕಿಯ ಘಟಕ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಇದುವರೆಗೂ ಸ್ಪಂದನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದುಸಾಮಾಜಿಕ ಕಾರ್ಯಕರ್ತ ಭದ್ರು ಭವರಾ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.