ADVERTISEMENT

ಭಾಲ್ಕಿ: ಕಬ್ಬು ನುರಿಸುವಿಕೆಯ ಹಂಗಾಮಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:06 IST
Last Updated 31 ಅಕ್ಟೋಬರ್ 2025, 7:06 IST
ಭಾಲ್ಕಿ ತಾಲ್ಲೂಕಿನ ಹುಣಜಿ (ಎ) ಗ್ರಾಮದ ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವಿಕೆಯ ಹಂಗಾಮಿಗೆ ಹುಲಸೂರಿನ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು
ಭಾಲ್ಕಿ ತಾಲ್ಲೂಕಿನ ಹುಣಜಿ (ಎ) ಗ್ರಾಮದ ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವಿಕೆಯ ಹಂಗಾಮಿಗೆ ಹುಲಸೂರಿನ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು   

ಭಾಲ್ಕಿ: ತಾಲ್ಲೂಕಿನ ಹುಣಜಿ (ಎ) ಗ್ರಾಮದ ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯ 2025-26ನೇ ಸಾಲಿನ ಕಬ್ಬು ನುರಿಸುವಿಕೆಯ ಹಂಗಾಮಿಗೆ ಹುಲಸೂರಿನ ಶಿವಾನಂದ ಸ್ವಾಮೀಜಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕಾರ್ಖಾನೆ ಕೇವಲ ಯಂತ್ರಗಳ ಸಮೂಹವಲ್ಲ. ಇದೊಂದು ದೇವರ ಗುಡಿ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಮನೆತನ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ, ಸಕ್ಕರೆ ಕಾರ್ಖಾನೆ, ಸಹಕಾರ ಸಂಘಗಳು ಸ್ಥಾಪಿಸುವ ಮೂಲಕ ಹಿಂದುಳಿದ ಜಿಲ್ಲೆಗೆ ವಿಪುಲವಾದ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಇವುಗಳಿಂದ ಜಿಲ್ಲೆಯ ರೈತರಿಗೆ, ಯುವಕರಿಗೆ, ಕಾರ್ಮಿಕರಿಗೆ ತುಂಬಾ ಅನುಕೂಲವಾಗಿದೆ’ ಎಂದು ಎಂದು ಹೇಳಿದರು.

ಕಾರ್ಖಾನೆ ಅಧ್ಯಕ್ಷ ಅಮರಕುಮಾರ ಖಂಡ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ, ಅಂಕುಶ ಪಾಟೀಲ, ಸಂತೋಷಕುಮಾರ ಪಾಟೀಲ, ಅಶೋಕಕುಮಾರ ಕೋಟಿ, ಸಂಜೀವಕುಮಾರ ಸೋನಾರ, ಶಂಕರ ಚವ್ಹಾಣ, ವಿನಾಯಕ ಬಿರಾದಾರ, ಸಂಜೀವರೆಡ್ಡಿ ಗೊಂಡೆ, ಸಂದೀಪ ಮಾನೆ, ಮೋಹನಪ್ಪಾ ಪಂಚಾಳ, ಸುರೇಖಾ ಶೆಟಕಾರ ಅಧಿಕಾರಿಗಳಾದ ಬಿ.ಶಿವಣ್ಣ, ವಿನೋದ ಕೋಟೆ, ಬಿ.ಎಂ.ಪಾಟೀಲ, ಚಿದಾನಂದ ಇದ್ದರು. ಕಚೇರಿ ಅಧೀಕ್ಷಕ ರಮೇಶ ಚಿದ್ರಿ ನಿರೂಪಿಸಿ, ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.