ಚಿಟಗುಪ್ಪ: ಇಲ್ಲಿಯ ನಾಲ್ಕು ಕಂಪ್ಯೂಟರ್ ಕೇಂದ್ರಗಳ ಗ್ರಾಮ ಒನ್ ಲಾಗಿನ್ ಐಡಿಯನ್ನು ತಹಶೀಲ್ದಾರ್ ರವೀಂದ್ರ ದಾಮಾ ಸೋಮವಾರ ರದ್ದುಗೊಳಿಸಿದ್ದಾರೆ.
ಸರ್ಕಾರದ ಹಲವು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳಿಂದ ಕಂಪ್ಯೂಟರ್ ಕೇಂದ್ರಗಳು ಹೆಚ್ಚು ಹಣ ಪಡೆಯುತ್ತಿರುವುದಕ್ಕೆ ಜನರು ಆಕ್ರೊಶ ವ್ಯಕ್ತಪಡಿಸಿದ್ದರು. ಸೋಮವಾರ ತಹಶೀಲ್ದಾರ್ ರವೀಂದ್ರ ದಾಮಾ ನಾಲ್ಕು ಕಂಪ್ಯೂಟರ್ ಕೇಂದ್ರಗಳ ಮೇಲೆ ದಾಳಿ ನಡೆಸಿದರು.
ಪರಿಶೀಲನೆ ವೇಳೆ ಕೆಲವರು ಅನಧಿಕೃತವಾಗಿ ಬೇರೆ ತಾಲ್ಲೂಕಿನ ಗ್ರಾಮ ಒನ್ ಕೇಂದ್ರಗಳ ಲಾಗಿನ್ ಬಳಸಿಕೊಂಡು ಗ್ರಾಹಕರಿಂದ ಹೆಚ್ಚು ಹಣ ಪಡೆಯುತ್ತಿರುವುದು ಕಂಡುಬಂದಿದೆ. ಹೀಗಾಗಿ ಸ್ಥಳದಲ್ಲಿಯೇ ಗ್ರಾಮ ಒನ್ ಕೇಂದ್ರಗಳ ಲಾಗಿನ ಐಡಿ ರದ್ದು ಪಡಿಸಿದರು ಹಾಗೂ ಮುಂದೆ ಇಂತಹ ಮೋಸ ಮಾಡದಂತೆ ಕಂಪ್ಯೂಟರ್ ಕೇಂದ್ರಗಳ ಮಾಲಿಕರಿಗೆ ಎಚ್ಚರಿಕೆ ನೀಡಿದರು. ದಾಳಿ ವೇಳೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.