ADVERTISEMENT

ಮಣ್ಣೆತ್ತಿನ ಅಮಾವಾಸ್ಯೆ: ಎತ್ತುಗಳಿಗೆ ಆರತಿ ಬೆಳಗಿದ ರೈತರು

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 12:24 IST
Last Updated 9 ಜುಲೈ 2021, 12:24 IST
ಬೀದರ್ ತಾಲ್ಲೂಕಿನ ಸಿರ್ಸಿ(ಎ) ಗ್ರಾಮದಲ್ಲಿ ಮಕ್ಕಳು ಮಣ್ಣೆತ್ತಿನ ಅಮವ್ಯಾಸೆ ನಿಮಿತ್ತ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಸಂಭ್ರಮಿಸಿದರು
ಬೀದರ್ ತಾಲ್ಲೂಕಿನ ಸಿರ್ಸಿ(ಎ) ಗ್ರಾಮದಲ್ಲಿ ಮಕ್ಕಳು ಮಣ್ಣೆತ್ತಿನ ಅಮವ್ಯಾಸೆ ನಿಮಿತ್ತ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಸಂಭ್ರಮಿಸಿದರು   

ಬೀದರ್‌: ಮುಂಗಾರಿನ ಆರಂಭದ ಹಬ್ಬ 'ಮಣ್ಣೆತ್ತಿನ ಅಮಾವಾಸ್ಯೆ’ ಪ್ರಯುಕ್ತ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೈತರು ಶುಕ್ರವಾರ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಪೂಜೆ ಮಾಡಿ್ರ ಸಮೃದ್ಧ ಬೆಳೆ ಬೆಳೆಯಲಿ ಎಂದು ಪ್ರಾರ್ಥಿಸಿದರು. ಊರ ದೇವರಿಗೆ ನೈವೇದ್ಯ ಸಮರ್ಪಿಸಿದರು.

ರೈತರು ಮನೆಯ ದನಕರುಗಳ ಮೈತೊಳೆದು ಕೋಡುಗಳಿಗೆ ರಿಬ್ಬನ್ ಹಾಗೂ ಬಲೂನ್‌ ಕಟ್ಟಿ ಸಿಂಗರಿಸಿದರು. ಕೆಲವರು ಮೈಮೇಲೆ ಗುಲಾಲು ಸವರಿ ಎತ್ತುಗಳಿಗೆ ಪ್ರೀತಿ ತೋರಿಸಿದರು.

ಹೊಲದಿಂದ ತಂದಿದ್ದ ಜಿಗಟು ಮಣ್ಣಿನಿಂದ ಜೋಡೆತ್ತುಗಳನ್ನು ತಯಾರಿಸಿ ಅವುಗಳಿಗೆ ಕುಂಕುಮ, ಅರಿಸಿಣದ ಬೊಟ್ಟು ಇಟ್ಟು ಕರ್ಪೂರ, ಊದುಬತ್ತಿ, ಲೋಬಾನ ಹಾಕಿ ಪೂಜೆ ಮಾಡಿದರು. ನಂತರ ಹೋಳಿಗೆ, ಅನ್ನ, ಪಲ್ಯದ ನೈವೇದ್ಯ ಸಮರ್ಪಿಸಿದರು.

ADVERTISEMENT

ಕೆಲ ಗ್ರಾಮಗಳಲ್ಲಿ ರೈತರು ಸಿಂಗರಿಸಿದ ಎತ್ತುಗಳ ಮೆರವಣಿಗೆ ನಡೆಸಿದರು. ಮಹಿಳೆಯರು ಎತ್ತುಗಳಿಗೆ ದೂರದಿಂದ ಆರತಿ ಬೆಳಗಿ ಕೈಮುಗಿದರು. ನಂತರ ಕುಟುಂಬದ ಸದಸ್ಯರೆಲ್ಲ ಹೋಳಿಗೆ, ತುಪ್ಪ, ಅನ್ನ ಹಾಗೂ ಅಂಬರ ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.