ADVERTISEMENT

ಉರಿಲಿಂಗಪೆದ್ದಿ ಮಠಗಳ ಸಂಪ್ರದಾಯ ಭಿನ್ನ: ಡಾ.ರವೀಂದ್ರನಾಥ ಹೇಳಿಕೆ

ಉರಿಲಿಂಗಪೆದ್ದಿ ಉತ್ಸವ, ವಿಮರ್ಶಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 2:12 IST
Last Updated 10 ಮಾರ್ಚ್ 2021, 2:12 IST
ಹುಲಸೂರ ತಾಲ್ಲೂಕಿನ ಬೇಲೂರನಲ್ಲಿ ಈಚೆಗೆ ನಡೆದ ಶರಣ ಉರಿಲಿಂಗಪೆದ್ದಿ ಉತ್ಸವದಲ್ಲಿ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು
ಹುಲಸೂರ ತಾಲ್ಲೂಕಿನ ಬೇಲೂರನಲ್ಲಿ ಈಚೆಗೆ ನಡೆದ ಶರಣ ಉರಿಲಿಂಗಪೆದ್ದಿ ಉತ್ಸವದಲ್ಲಿ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು   

ಹುಲಸೂರ: ‘ರಾಜ್ಯದಲ್ಲಿ ನೂರಾರು ಉರಿಲಿಂಗಪೆದ್ದಿ ಮಠಗಳಿದ್ದು ಅವುಗಳು ತಮ್ಮದೇ ಆದ ಸಂಪ್ರದಾಯ ಹೊಂದಿವೆ. ಇವುಗಳ ಅಭಿವೃದ್ಧಿಗೆ ಸರ್ಕಾರ ಸೌಲಭ್ಯ ನೀಡಬೇಕು’ ಎಂದು ವಿದ್ವಾಂಸ ಡಾ.ರವೀಂದ್ರನಾಥ ಹೇಳಿದರು.

ತಾಲ್ಲೂಕಿನ ಬೇಲೂರನ ಶರಣ ಉರಿಲಿಂಗಪೆದ್ದಿ ಮಠದಲ್ಲಿ ಈಚೆಗೆ ಆಯೋಜಿಸಿದ್ದ ಶಿವಲಿಂಗೇಶ್ವರ ಸ್ಮರಣೋತ್ಸವ, ಶರಣ ಉರಿಲಿಂಗಪೆದ್ದಿ ಉತ್ಸವ ಹಾಗೂ ಪ್ರಥಮ ವಿಮರ್ಶಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ‘ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

‘ಉರಿಲಿಂಗಪೆದ್ದಿಯವರು 12ನೇ ಶತಮಾನದ ಪ್ರಮುಖ ಶರಣರು. ಅನೇಕ ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮಾನವನ ಬದುಕು ಬದಲಿಸುವ ಶಕ್ತಿಯಿದೆ. ಬಸವಣ್ಣನವರು ಜಾತಿ, ವರ್ಗರಹಿತ ಸಮಾಜ ನಿರ್ಮಾಣಕ್ಕಾಗಿ ಪ್ರಯತ್ನಿಸಿದರು. ಅವರೊಂದಿಗೆ ಅನೇಕ ಶರಣರು ಸಂಘಟಿತರಾಗಿ ವಚನಗಳನ್ನು ರಚಿಸಿ ಸಮಾಜ ಪರಿವರ್ತನೆಯ ಕಾರ್ಯ ಕೈಗೊಂಡರು’ ಎಂದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ‘ಶರಣರ, ಸಂತರ, ಸತ್ಪುರುಷರ ಸಂದೇಶದ ಪಾಲನೆ ಅಗತ್ಯವಾಗಿದೆ’ ಎಂದರು.

ಲೇಖಕ ಚನ್ನಪ್ಪ ಕಟ್ಟಿ, ಸಮ್ಮೇಳನಾಧ್ಯಕ್ಷ ಶ್ರೀಶೈಲ್ ನಾಗರಾಳ ಮಾತನಾಡಿದರು.

ಮಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಆನಂದ ದೇವಪ್ಪ, ಮಲ್ಲಮ್ಮ ಬಿ.ನಾರಾಯಣರಾವ್, ಸುರೇಶ ಕಾನೇಕರ್, ಶಶಿಕಾಂತ ದುರ್ಗೆ, ಶಿವರಾಜ ನರಶೆಟ್ಟಿ, ಅರ್ಜುನ ಕನಕ, ಗೌತಮ ನಾರಾಯಣರಾವ್ ಇದ್ದರು. ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಸ್ವಾಗತಿಸಿದರು.

‘ವಿಮರ್ಶೆ ಶ್ರೇಷ್ಠ ಸಾಹಿತ್ಯ ರಚನೆಗೆ ಪ್ರೇರಣೆ’

‘ವಿಮರ್ಶಕನು ಸಾಹಿತ್ಯದ ಗುಣದೋಷಗಳ ಮೌಲ್ಯಮಾಪನ ಕೈಗೊಂಡು ಶ್ರೇಷ್ಠ ಸಾಹಿತ್ಯದ ರಚನೆಗೆ ಪ್ರೇರಣೆ ನೀಡುತ್ತಾನೆ’ ಎಂದು ಸಮ್ಮೇಳನಾಧ್ಯಕ್ಷ ಡಾ.ಶ್ರೀಶೈಲ್ ನಾಗರಾಳ ಹೇಳಿದರು.

ಬೇಲೂರನಲ್ಲಿ ನಡೆದ ಪ್ರಥಮ ವಿಮರ್ಶಾ ಸಮ್ಮೇಳನ ಹಾಗೂ ಉರಿಲಿಂಗ ಪೆದ್ದಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರೊ.ಎಚ್.ಟಿ.ಪೋತೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ‘ಯುವಕರು ಸಂಘಟಿತರಾಗಬೇಕು. ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಮಾತ್ರ ನ್ಯಾಯ ಪಡೆಯಬಹುದು’ ಎಂದರು.

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ, ರಾಜಕುಮಾರ ಮಾಳಗೆ, ಸಂತೋಷ ಹಿರೇಮನಿ ಮಾತನಾಡಿದರು. ಪಂಚಾಕ್ಷರಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಡಾ.ಪದ್ಮಾಕರ ಮಟ್ಟೆ ಬರೆದ ‘ವಚನಕಾರ ಉರಿಲಿಂಗಪೆದ್ದಿ’ ಗ್ರಂಥ ಬಿಡುಗಡೆಗೊಳಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವೇರಿ ಚಿದಾನಂದ ವಕಾರೆ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಶಿಂಧೆ, ಮಾರುತಿ ಬೌದ್ಧೆ, ಜಗನ್ನಾಥ ಚಿಲ್ಲಾಬಟ್ಟೆ, ಸುರೇಶ ಕಾನೇಕರ್, ಸಿದ್ರಾಮ ಶಿಂಧೆ, ವಿಜಯಕುಮಾರ ಸೋನಾರೆ, ಸಂಜೀವ ಜಾಧವ, ಡಾ.ವಿಜಯಕುಮಾರ ಗೋಪಾಲೆ, ಡಾ.ಸತೀಶ ಡೊಂಗರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.