ಹುಲಸೂರ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಅರ್ಧ ತಾಸು ಮಳೆ ಸುರಿದಿದೆ. ಬೇಸಿಗೆಯ ಬಿರು ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿತು.
ತಾಲ್ಲೂಕಿನ ಮಿರಕಲ, ಗಡಿಗೌಡಗಾಂವ, ಬೇಲೂರ, ಹನುಮಂತವಾಡಿ, ಗುತ್ತಿ, ವಾಂಝರಖೆಡ್, ಮೆಹಕರ, ಅಳವಾಯಿ, ಹಲಸಿ ತುಗಾಂವ, ಅಟ್ಟರಗಾ, ಸೇರಿ ಇತರೆಡೆ ಗುಡುಗು ಸಹಿತ ಜೋರಾದ ಮಳೆ ಸುರಿದಿದೆ.
ಬೇಲೂರ, ಗೋರಟಾ, ಮುಚಳoಬ ಸೇರಿದಂತೆ ಇತರೆಡೆ ಗ್ರಾಮದಲ್ಲಿ ಜಿಟಿಜಿಟಿ ಮಳೆ ಸುರಿದಿದೆ.
ಮುಂಗಾರು ಹಂಗಾಮಿನ ಉಳುಮೆಗೆ ಸಜ್ಜಾಗಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಇಲ್ಲಿವರೆಗೆ ಬಿದ್ದ ಮಳೆಯಿಂದ ಯಾವುದೇ ಜೀವ ಹಾನಿಯಾಗಿಲ್ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.