ADVERTISEMENT

ದರ್ಗಾ ಉರುಸ್: ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 9:47 IST
Last Updated 27 ಸೆಪ್ಟೆಂಬರ್ 2019, 9:47 IST
ಬೀದರ್‌ನ ಸಿದ್ದಿ ತಾಲೀಂನಲ್ಲಿರುವ ಉರ್ದು ಹಾಲ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಯುವಕರೊಬ್ಬರು ರಕ್ತದಾನ ಮಾಡಿದರು
ಬೀದರ್‌ನ ಸಿದ್ದಿ ತಾಲೀಂನಲ್ಲಿರುವ ಉರ್ದು ಹಾಲ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಯುವಕರೊಬ್ಬರು ರಕ್ತದಾನ ಮಾಡಿದರು   

ಬೀದರ್: ಹಜರತ್ ಸೈಯದ್ ಜಮಾಲ್ ಎ ಬಹಾರ್ ದರ್ಗಾದ ಉರುಸ್ ಪ್ರಯುಕ್ತ ಇಲ್ಲಿಯ ಸಿದ್ದಿ ತಾಲೀಂನಲ್ಲಿರುವ ಉರ್ದು ಹಾಲ್‌ನಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಶಿಬಿರದಲ್ಲಿ ಸುಮಾರು 50 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯರು, ರಕ್ತದಾನವು ಅವಶ್ಯಕತೆ ಇರುವವರ ಜೀವ ಉಳಿಸುತ್ತದೆ ಎಂದು ಹೇಳಿದರು.

ADVERTISEMENT

ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ ಅನೇಕ ವರ್ಷಗಳಿಂದ ರಕ್ತದಾನ ಶಿಬಿರ ಆಯೋಜಿಸುತ್ತ ಬರುತ್ತಿದ್ದಾರೆ. ಈ ಮೂಲಕ ರಕ್ತದ ತುರ್ತು ಅವಶ್ಯಕತೆ ಇರುವವರಿಗೆ ನೆರವಾಗುತ್ತಿದ್ದಾರೆ ಎಂದು ಪ್ರಶಂಶಿಸಿದರು.

ನಬಿ ಖುರೇಶಿ ಅವರಂತೆ ಸಂಘ ಸಂಸ್ಥೆಗಳ ಪ್ರಮುಖರು ರಕ್ತದಾನ ಶಿಬಿರಗಳನ್ನು ಆಯೋಜಿಸಬೇಕು. ರಕ್ತದಾನದಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮಾನವೀಯ ನೆಲೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ನಗರಸಭೆ ಆಯುಕ್ತ ಬಸಪ್ಪ, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳಿ, ಕಾರ್ಯನಿರ್ವಾಹಕ ಎಂಜಿನಿಯರ್ ಶಶಿಕಾಂತ ಮಳ್ಳಿ, ಶಿಬಿರದ ಆಯೋಜಕರೂ ಆದ ನಗರಸಭೆ ಮಾಜಿ ಸದಸ್ಯ ನಬಿ ಖುರೇಶಿ, ಡಾ. ರಾಜೇಶ್ವರ ಎ.ಎಸ್., ಡಾ. ಸಿದ್ಧಲಿಂಗೇಶ್ವರ, ಡಾ. ನಿತಿನನ್‌ಕುಮಾರ, ಭಾಲ್ಕೆ ಆಸ್ಪತ್ರೆಯ ಬಸಪ್ಪ ಭಾಲ್ಕೆ, ಪ್ರಶಾಂತ ವಿಶ್ವಕರ್ಮ, ಮಾಜೀದ್ ಬಿಲಾಲ್, ಮಕ್ಸೂದ್ ಇದ್ದರು.

ಇದೇ ವೇಳೆ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.