ADVERTISEMENT

ಬೀದರ್‌ನಲ್ಲಿ ವಚನ ವಿಜಯೋತ್ಸವ: ಜನವರಿ 31ರಂದು ಏನೆಲ್ಲಾ?

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:53 IST
Last Updated 31 ಜನವರಿ 2026, 7:53 IST
ವಚನ ವಿಜಯೋತ್ಸವ ಪಥ ಸಂಚಲನದಲ್ಲಿ ಶರಣ–ಶರಣೆಯರು ಹೆಜ್ಜೆ ಹಾಕಿದರು
ವಚನ ವಿಜಯೋತ್ಸವ ಪಥ ಸಂಚಲನದಲ್ಲಿ ಶರಣ–ಶರಣೆಯರು ಹೆಜ್ಜೆ ಹಾಕಿದರು   

ಬಸವ ಸೇವಾ ಪ್ರತಿಷ್ಠಾನ: 24ನೇ ವಚನ ವಿಜಯೋತ್ಸವ: ಸ್ಥಳ: ಬಸವಗಿರಿ, ಪಾಪನಾಶ ಹಿಂಭಾಗ, ಬೀದರ್‌.

ಬೆಳಿಗ್ಗೆ 8ಕ್ಕೆ ಗುರುವಚನ ಸಾಮೂಹಿಕ ಪಾರಾಯಣ 1,008 ಮಕ್ಕಳಿಂದ. ಉದ್ಘಾಟನೆ–ಡಿಡಿಪಿಐ ಸುರೇಶಗೌಡ ಎಚ್‌.ಜಿ. ಸಾನ್ನಿಧ್ಯ–ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮೀಜಿ. ಸಮ್ಮುಖ–ಸವದತ್ತಿ ಬಸವ ದೇವರು. ಅನುಭಾವ–ಮುದ್ದೆಬಿಹಾಳದ ರುದ್ರೇಶ ಜಿ. ಕಿತ್ತೂರ. ಅಧ್ಯಕ್ಷತೆ– ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರಕುಮಾರ ಮಣಗೇರಿ. ಗುರುಪೂಜೆ–ಜಯಶ್ರೀ ಸಿದ್ದು ಮಣಿಗೆ.

ಬೆಳಿಗ್ಗೆ 11ಕ್ಕೆ ಯುವಶಕ್ತಿ ಸಮಾವೇಶ ಹಾಗೂ ವಿಶ್ವಕಲ್ಯಾಣ ಯುವ ಪರಿಷತ್‌ ನಾಮಫಲಕ ಅನಾವರಣ ಸಮಾರಂಭ. ಉದ್ಘಾಟನೆ–ಸಂಸದ ಸಾಗರ ಖಂಡ್ರೆ. ನೇತೃತ್ವ–ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ–ಗಂಗಾಂಬಿಕಾ ಅಕ್ಕ. ಸಾನ್ನಿಧ್ಯ–ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು. ಶರಣ ವಿಜ್ಞಾನಿ ಪುರಸ್ಕಾರ–ಇಸ್ರೋ ಉಪನಿರ್ದೇಶಕ ಕೆ.ಎಲ್‌. ಶಿವಾನಿ. ಅನುಭಾವ–ಬೆಂಗಳೂರಿನ ಸಹಾಯಕ ಪೊಲೀಸ್‌ ಆಯುಕ್ತೆ ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ, ಅಧ್ಯಕ್ಷತೆ–ಎಂ.ಎಸ್. ಜೋಗದ. ಗುರುಪೂಜೆ–ಸೇಜಲ ಬಸವಕುಮಾರ ಸುಲಗುಂಟೆ. ವಚನ ನೃತ್ಯ–ರಾಣಿ ಸತ್ಯಮೂರ್ತಿ ಮತ್ತು ತಂಡ.

ADVERTISEMENT

ಮಧ್ಯಾಹ್ನ 2.30ಕ್ಕೆ ಹಿರಿಯರಿಗೆ ಗೌರವ ಸಮರ್ಪಣೆ. ಸಾನ್ನಿಧ್ಯ–ಬಸವಕಲ್ಯಾಣ ಬಸವ ಮಹಾಮನೆಯ ಸಿದ್ದರಾಮೇಶ್ವರ ಸ್ವಾಮೀಜಿ. ಅಧ್ಯಕ್ಷತೆ–ಸಾಹಿತಿ ಸೋಮನಾಥ ಯಾಳವಾರ. ವಚನ ನೃತ್ಯ–ಶ್ರೇಯಾ ಭಂಡೆ.

ಮಧ್ಯಾಹ್ನ 3ಕ್ಕೆ ಶರಣ ಸಂಸ್ಕೃತಿಯ ವೈಶಿಷ್ಟ್ಯ ಧರ್ಮ ಚಿಂತನಗೋಷ್ಠಿ. ಉದ್ಘಾಟನೆ–ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಎಲಿಗಾರ. ಅನುಭಾವ–ಲೋಕಾಯುಕ್ತ ವಕೀಲ ಸಂತೋಷ ನಾಗರಾಳೆ. ಸಾನ್ನಿಧ್ಯ–ಭಾತಂಬ್ರಾ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ. ನೇತರ್ತ್ವ–ಖೇರ್ಡಾ ವಿರಕ್ತಮಠದ ಶಿವಲಿಂಗ ಸ್ವಾಮೀಜಿ. ಅಧ್ಯಕ್ಷತೆ–ಜಾಗತಿಕ ಲಿಂಗಾಯತ ಮಹಾಸಭೆ ಹಿರಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ. ಗುರುಪೂಜೆ–ನಿರ್ಮಲಾ ಎಸ್‌.ಕೆ. ಪಾಟೀಲ.

ಸಂಜೆ 6ಕ್ಕೆ ಶರಣ ಕಲಾ ವೈಭವ ವಚನ ನೃತ್ಯೋತ್ಸವ. ನೃತ್ಯಾಂಗನಾ ನಾಟ್ಯ ಮತ್ತು ಕಲಾ ಕೇಂದ್ರ. ಉದ್ಘಾಟನೆ–ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿರೇಖಾ ಪಾಟೀಲ್‌. ಅಧ್ಯಕ್ಷತೆ–ಮಹಾದೇವಿ ವೈಜಿನಾಥ ಬಿರಾದಾರ. ಯಕ್ಷಗಾನ–ಕಲಬುರಗಿಯ ಕವಿತಾ ಮುಂಡರಗಿಮಠ. ಕೋಲಾಟ–ಕಲಬುರಗಿಯ ಅಕ್ಕಮಹಾದೇವಿ ಕಾಲೊನಿಯ ನೀಲಮ್ಮನ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.